ಅಂಪೈರ್ ತಪ್ಪು ನಿರ್ಣಯ: ಐಪಿಎಲ್‌ನಲ್ಲಿ ಹೊಸ ನಿಯಮ ತರುವಂತೆ ಬಿಸಿಸಿಐಗೆ ನಟಿ ಪ್ರೀತಿ ಜಿಂಟಾ ಮನವಿ!
ಐಪಿಎಲ್ ಟೂರ್ನಿಯ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸೋಲು ಕಂಡಿತ್ತು. ಇದನ್ನು ಪಂಜಾಬ್ ಪಂದ್ಯ ಸೋಲು ಕಾಣಲು ಅಂಪೈರ್ ನೀಡಿದ ಶಾರ್ಟ್ ರನ್ ಎಂದು ಟೀಕೆಗಳು ವ್ಯಕ್ತವಾಗುತ್ತಿವೆ.

ದುಬೈ: ಐಪಿಎಲ್ ಟೂರ್ನಿಯ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸೋಲು ಕಂಡಿತ್ತು. ಇದನ್ನು ಪಂಜಾಬ್ ಪಂದ್ಯ ಸೋಲು ಕಾಣಲು ಅಂಪೈರ್ ನೀಡಿದ ಶಾರ್ಟ್ ರನ್ ಎಂದು ಟೀಕೆಗಳು ವ್ಯಕ್ತವಾಗುತ್ತಿವೆ.
ಇನ್ನು ಅಂಪೈರ್ ನೀಡಿದ ಶಾರ್ಟ್ ರನ್ ನಿಂದ ತಂಡ ಸೋತಿರುವುದಕ್ಕೆ ಪಂಜಾಬ್ ಸಹ ಮಾಲೀಕೆ, ನಟಿ ಪ್ರೀತಿ ಜಿಂಟಾ ತೀವ್ರ ಬೇಸರ ವ್ಯಕ್ತಪಡಿಸಿದ್ದು ಅಂಪೈರ್ ತಪ್ಪು ನಿರ್ಣಯ ಸಂಬಂಧ ಐಪಿಎಲ್ ನಲ್ಲಿ ಹೊಸ ನಿಯಮ ತರುವಂತೆ ಬಿಸಿಸಿಐಗೆ ಮನವಿ ಮಾಡಿದ್ದಾರೆ.
ಮಹಾಮಾರಿ ಕೊರೋನಾ ನಡುವೆ ನಾನು ದುಬೈಗೆ ಆಗಮಿಸಿದ್ದು 6 ದಿನಗಳ ಕಾಲ ಕ್ವಾರಂಟೈನ್ ನಲ್ಲಿದ್ದೆ. ಐದು ಬಾರಿ ಕೊರೋನಾ ಟೆಸ್ಟ್ ಮಾಡಿಸಿದ್ದರೂ ನಗುತ್ತಲೆ ಇದ್ದೆ. ಆದರೆ ಈ ಒಂದು ಶಾರ್ಟ್ ರನ್ ನನಗೆ ಹೆಚ್ಚಾಗಿ ಬಾದಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಅಂಪೈರ್ ತಪ್ಪು ನಿರ್ಣಯ ಕುರಿತಂತೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಂಪೈರ್ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ನೀಡಬೇಕು ಎನ್ನುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


