ಈ ಸಲ ಕಪ್ ನಮ್ಮದೇ. . . .‘ಅಣು ಅಣುವಲಿ ಆರ್ ಸಿಬಿ’ ಹಾಡಿನ ಮೂಲಕ ಹಾರೈಕೆ
ಐಪಿಎಲ್2020 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕ್ರಿಕೆಟ್ ಅಭಿಮಾನಿಗಳು ಈ ಸಲ ಕಪ್ ನಮ್ಮದೆ ಅಂತ ಖುಷಿಯಿಂದ ಹೇಳಿಕೊಳ್ಳುತ್ತಿದ್ದಾರೆ.

ಬೆಂಗಳೂರು: ಐಪಿಎಲ್ 2020 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕ್ರಿಕೆಟ್ ಅಭಿಮಾನಿಗಳು ಈ ಸಲ ಕಪ್ ನಮ್ಮದೆ ಅಂತ ಖುಷಿಯಿಂದ ಹೇಳಿಕೊಳ್ಳುತ್ತಿದ್ದಾರೆ. ಅದರಂತೆ ಯುವ ಪ್ರತಿಭೆಗಳೇ ಸೇರಿಕೊಂಡು ಆರ್ ಸಿಬಿ ತಂಡಕ್ಕೆ ಶುಭ ಹಾರೈಸುವಂತೆ ಮೂರು ನಿಮಿಷದ ವಿಡಿಯೋ ಹಾಡನ್ನು ಸಿದ್ದಪಡಿಸಿದ್ದಾರೆ.
ಅಣು ಅಣುವಲಿ ಅರ್ ಸಿಬಿ, ಕಣ ಕಣದಲಿ ಆರ್ ಸಿಬಿ, ಮನ ಮನದಲೂ ಆರ್ ಸಿಬಿ ಎಂದು ಪ್ರಾರಂಭವಾಗುವ ಗೀತೆಯಲ್ಲಿ ಕಲಾವಿದರುಗಳಾದ ವಿಜಯ್ ರಾಘವೇಂದ್ರ, ಬೀರ್ ಬಲ್ ಖ್ಯಾತಿಯ ಶ್ರೀನಿ, ಪ್ರಣೀತಾಸುಭಾಷ್, ಅದಿತಿಪ್ರಭುದೇವ, ಅಮೃತಾ ಅಯ್ಯಂಗಾರ್, ಟಗರು ನಾಯಕಿ ಸಂಜನಾ ಆನಂದ್, ಕೆಂಡಸಂಪಿಗೆ ವಿಕ್ಕಿ, ಪ್ರಭುಮುಂಡ್ಕೂರ್ ಮುಂತಾದವರು ಕಾಣಿಸಿಕೊಂಡಿದ್ದಾರೆ.
ನಿರ್ದೇಶನ-ನೃತ್ಯ ಮಾಧುರಿಪರಶುರಾಮ್, ಸಂಗೀತ-ಸಾಹಿತ್ಯ-ಗಾಯನ ಅನಿರುದ್ದಶಾಸ್ತ್ರೀ, ಛಾಯಾಗ್ರಹಣ ಉದಯ್ ಲೀಲಾ, ಸಂಕಲನ ಸಾಗರ್ ಮಹದೇವ್, ಮೈತ್ರಿಅಯ್ಯರ್, ಮಾದೇಶ್ ಭಾರದ್ವಾಜ್ ಧ್ವನಿಯಾಗಿದ್ದಾರೆ.
ವಿಧಾನಸೌಧ ಸೇರಿದಂತೆ ಬೆಂಗಳೂರು ಸುತ್ತಮುತ್ತ ಎರಡು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಹೈದಾ ಸ್ಟುಡಿಯೋ ಮುಖಾಂತರ ನಿರ್ಮಾಣಗೊಂಡಿರುವ ಹಾಡಿಗೆ ಪ್ರಾರಂಭ, ತ್ರಿಕೋನ, ಸಲಗ, ಫ್ಯಾಮಿಲಿಪ್ಯಾಕ್ ಚಿತ್ರಗಳು ಸೇರಿದಂತೆ ಒಂದಷ್ಟು ಸಂಸ್ಥೆಗಳು ಇವರ ಶ್ರಮವನ್ನು ಗುರುತಿಸಿ ಪ್ರಾಯೋಜಕತ್ವದ ಜವಾಬ್ದಾರಿ ಹೊತ್ತುಕೊಂಡಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


