ಸ್ಪಾಟ್ ಫಿಕ್ಸಿಂಗ್: ಶ್ರೀಶಾಂತ್ ನಿಷೇಧ ಶಿಕ್ಷೆ ಅವಧಿ ಮುಕ್ತಾಯ
ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿದ ಭಾರತ ತಂಡದ ವೇಗದ ಬೌಲರ್ ಎಸ್. ಶ್ರೀಶಾಂತ್ ಅವರ ಏಳು ವರ್ಷಗಳ ನಿಷೇಧ ಶಿಕ್ಷೆ ಅವಧಿ ಭಾನುವಾರ ಕೊನೆಗೊಂಡಿದೆ.

ನವದೆಹಲಿ: ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿದ ಭಾರತ ತಂಡದ ವೇಗದ ಬೌಲರ್ ಎಸ್. ಶ್ರೀಶಾಂತ್ ಅವರ ಏಳು ವರ್ಷಗಳ ನಿಷೇಧ ಶಿಕ್ಷೆ ಅವಧಿ ಭಾನುವಾರ ಕೊನೆಗೊಂಡಿದೆ.
ನಿಷೇಧ ಅವಧಿ ಮುಕ್ತಾಯಗೊಂಡ ನಂತರ ದೇಶಿಯ ಮಟ್ಟದಲ್ಲಿ ಮತ್ತೆ ವೃತ್ತಿ ಜೀವನ ಆರಂಭಿಸುವುದಾಗಿ 37 ವರ್ಷದ ಶ್ರೀಶಾಂತ್ ಈಗಾಗಲೇ ಸ್ಪಷ್ಪಪಡಿಸಿದ್ದಾರೆ. ಫಿಟ್ನೇಸ್ ಸಾಬೀತುಪಡಿಸಿದರೆ ಶ್ರೀಶಾಂತ್ ಅವರನ್ನು ಪರಿಗಣಿಸುವುದಾಗಿ ಅವರ ತವರು ರಾಜ್ಯ ಕೇರಳ ಭರವಸೆ ವ್ಯಕ್ತಪಡಿಸಿದೆ.
ಎಲ್ಲಾ ಆರೋಪಗಳಿಂದ ಇದೀಗ ಮುಕ್ತವಾಗುತ್ತಿದ್ದು, ಹೆಚ್ಚಾಗಿ ಪ್ರೀತಿಸುವ ಕ್ರೀಡೆಯನ್ನು ಪ್ರತಿನಿಧಿಸುತ್ತೇನೆ ಎಂದು ಶುಕ್ರವಾರವೇ ಶ್ರೀಶಾಂತ್ ಟ್ವೀಟ್ ಮಾಡಿದ್ದರು. ನಾನು ಆಡುವ ಯಾವುದೇ ತಂಡಕ್ಕೆ ನಾನು ಅತ್ಯುತ್ತಮವಾದದನ್ನು ನೀಡುತ್ತೇನೆ ಎಂದು ಶ್ರೀಶಾಂತ್ ಹೇಳಿದ್ದಾರೆ.
ಆದಾಗ್ಯೂ, ಕೋವಿಡ್-19 ಕಾರಣ ಪ್ರಸ್ತುತ ದೇಶಿಯ ಟೂರ್ನಿಗಳು ಮುಂದೂಡಲ್ಪಟ್ಟಿವೆ. ಒಂದು ವೇಳೆ ಕೇರಳ ಸರ್ಕಾರ ಅವಕಾಶ ನೀಡಿದರೆ, ಶ್ರೀಶಾಂತ್ ಮತ್ತೆ ಕಮ್ ಬ್ಯಾಂಕ್ ಆಗಲಿದ್ದಾರೆ. ಆಗಸ್ಟ್ ತಿಂಗಳಲ್ಲಿ ದೇಶಿಯ ಋತುವಿನ ಟೂರ್ನಿಗಳು ಆರಂಭವಾಗಬೇಕಿತ್ತು. ಆದರೆ, ಕೋವಿಡ್-19 ಕಾರಣ ಮುಂದೂಡಲ್ಪಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


