ಕ್ರಿಕೆಟ್

ರೋಚಕ ಪಂದ್ಯ: 2ನೇ ಸೂಪರ್ ಓವರ್ ನಲ್ಲಿ ಮುಂಬೈ ತಂಡವನ್ನು ಮಣಿಸಿದ ಪಂಜಾಬ್!

ಮುಂಬೈ ಇಂಡಿಯನ್ಸ್-ಕಿಂಗ್ಸ್ XI ಪಂಜಾಬ್ ನಡುವೆ ನಡೆದ ಐಪಿಎಲ್-2020 36ನೇ ಪಂದ್ಯದಲ್ಲಿ ಸತತ ಎರಡೂ ಸೂಪರ್ ಓವರ್ ಗಳ ಬಳಿಕ ಪಂಜಾಬ್ ತಂಡ ಗೆಲುವು ಸಾಧಿಸಿತು.

ರೋಚಕ ಪಂದ್ಯ: 2ನೇ ಸೂಪರ್ ಓವರ್ ನಲ್ಲಿ ಮುಂಬೈ ತಂಡವನ್ನು ಮಣಿಸಿದ ಪಂಜಾಬ್!
ರೋಚಕ ಪಂದ್ಯ: ಸತತ 2 ಸೂಪರ್ ಓವರ್ ಗಳ ಬಳಿಕ ಮುಂಬೈ ತಂಡವನ್ನು ಮಣಿಸಿದ ಪಂಜಾಬ್!
Published On :

ಮುಂಬೈ ಇಂಡಿಯನ್ಸ್-ಕಿಂಗ್ಸ್ XI ಪಂಜಾಬ್ ನಡುವೆ ನಡೆದ ಐಪಿಎಲ್-2020 36ನೇ ಪಂದ್ಯದಲ್ಲಿ ಸತತ ಎರಡೂ ಸೂಪರ್ ಓವರ್ ಗಳ ಬಳಿಕ ಪಂಜಾಬ್ ತಂಡ ಗೆಲುವು ಸಾಧಿಸಿತು. 

ಅತ್ಯಂತ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಮೊದಲು ಮುಂಬೈ ಇಂಡಿಯನ್ಸ್-ಪಂಜಾಬ್ XI ಕಿಂಗ್ಸ್ ನಡುವೆ ನಡೆದ ಐಪಿಎಲ್-2020 ಪಂದ್ಯ ಟೈ ನಲ್ಲಿ ಅಂತ್ಯಗೊಂಡಿತು. 

ಮೊದಲ ಸೂಪರ್ ಓವರ್ ನಲ್ಲಿ ಕಿಂಗ್ಸ್ XI ಪಂಜಾಬ್ ತಂಡ 2 ವಿಕೆಟ್ ನಷ್ಟಕ್ಕೆ 5 ರನ್ ಗಳಿಸಿ ಗೆಲ್ಲುವುದಕ್ಕೆ ಎದುರಾಳಿ ತಂಡಕ್ಕೆ 6 ರನ್ ಗಳ ಗುರಿ ನೀಡಿತ್ತು. ಆದರೆ ಈ ಬಾರಿಯೂ ಮುಂಬೈ ತಂಡ ಪಂದ್ಯವನ್ನು ಸಮಬಲವನ್ನಾಗಿಸಿಕೊಂಡ ಪರಿಣಾಮ ಮತ್ತೊಮ್ಮೆ ಸೂಪರ್ ಓವರ್ ನಡೆಸಬೇಕಾಯಿತು. 

ಎರಡನೇ ಬಾರಿ ನಡೆದ ಸೂಪರ್ ಓವರ್ ನಲ್ಲಿ ಮುಂಬೈ ತಂಡದ ಪರ ಪೋಲ್ಲಾರ್ಡ್ ಹಾಗೂ ಹಾರ್ದಿಕ್ ಪಾಂಡ್ಯ ಜೊತೆಯಾಟದಲ್ಲಿ 9 ರನ್ ಗಳಿಸಿದ್ದಾಗ ಹಾರ್ದಿಕ್ ವಿಕೆಟ್ ಒಪ್ಪಿಸಿದರು. ಮುಂಬೈ ತಂಡ 11 ರನ್ ಗಳನ್ನು ಗಳಿಸಿ ಎದುರಾಳಿ ತಂಡಕ್ಕೆ 12 ರನ್ ಗಳ ಟಾರ್ಗೆಟ್ ನೀಡಿತು. ಕಿಂಗ್ಸ್ XI ತಂಡದ ಪರ ಮಯಾಂಕ್ ಅಗರ್ವಾಲ್ ಹಾಗೂ ಕ್ರಿಸ್ ಗೇಲ್ 15 ರನ್ ಗಳಿಸುವ ಮೂಲಕ ತಂಡ ಜಯಗಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು.

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.