ಕ್ರಿಕೆಟ್

ಐಪಿಎಲ್ 2020:  ಪಂಜಾಬ್ ವಿರುದ್ಧ ಕೆಕೆಆರ್ ಗೆ 2 ರನ್ ಗಳ ರೋಚಕ ಜಯ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ರ 24 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು 2 ರನ್ ಗಳಿಂದ ಸೋಲಿಸಿತು.

ಐಪಿಎಲ್ 2020:  ಪಂಜಾಬ್ ವಿರುದ್ಧ ಕೆಕೆಆರ್ ಗೆ 2 ರನ್ ಗಳ ರೋಚಕ ಜಯ
Published On :

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ರ 24 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್  ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು 2 ರನ್ ಗಳಿಂದ ಸೋಲಿಸಿತು. 

165 ರನ್ ಗಳ ಸಾಧಾರಣ ಮೊತ್ತ ಬೆನ್ನತ್ತಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ  ಆರಂಭಿಕ ಆಟಗಾರ  ಕೆ.ಎಲ್. ರಾಹುಲ್ ಮತ್ತು ಮಾಯಾಂಕ್ ಅಗರ್ವಾಲ್ ಅರ್ಧಶತಕದ ಜತೆಯಾಟ ಪ್ರದರ್ಶಿಸಿದ್ದರು. 

ಒಂದು ಹಂತದಲ್ಲಿ, ಕಿಂಗ್ಸ್ ಇಲೆವೆನ್ ಪಂಜಾಬ್ ಸುಲಭವಾಗಿ ಪಂದ್ಯವನ್ನು ಗೆಲ್ಲುತ್ತದೆ ಎಂದು ತೋರುತ್ತಿತ್ತು ಆದರೆ ಪ್ರಸಾದ್ ಕೃಷ್ಣ ಮತ್ತು ಸುನಿಲ್ ನರೈನ್ ಕೋಲ್ಕತ್ತಾಗೆ ಜಯ ಲಭಿಸುವಂತೆ ಮಾಡಿದ್ದರು. ಅಲ್ಲದೆ ಕೆಕೆಆರ್ ಸುಲಭ ಜಯ ಸಾಧಿಸಲು ಕಾರಣವಾದರು.

ಇದಕ್ಕೆ ಮುನ್ನ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೋಲ್ಕತ್ತಾ ನಿಗದಿತ  20 ಓವರ್​​ನಲ್ಲಿ 6 ವಿಕೆಟ್ ನಷ್ಟಕ್ಕೆ  164 ರನ್​​ಗಳಿಸಿತ್ತು.

ಕೋಲ್ಕತ್ತಾ ಪರ ಶುಭಮ್ ಗಿಲ್  57, ದಿನೇಶ್ ಕಾರ್ತಿಕ್ 58 ರನ್ ಗಳಿಸಿ ಮಿಂಚಿದರೆ ಮಾರ್ಗನ್​ 24 ರನ್ ಗಳಿಸಿದ್ದರು.

ಪಂಜಾಬ್ ಪರವಾಗಿ  ಶಮಿ, ರವಿ ಬಿಸ್ನೋಯಿ, ಅರ್ಶದೀಪ್ ಸಿಂಗ್ ತಲಾ ಒಂದೊಂದು ವಿಕೆಟ್ ಕಿತ್ತರು.

ಪಂಜಾಬ್ ಪರ ಕೆ.ಎಲ್. ರಾಹುಲ್ 74,  ಮಯಾಂಕ್ ಅಗರ್ವಾಲ್ 56, ಎನ್. ಪೂರನ್ 16 ರನ್ ಗಳಿಸಿದ್ದರು. ಕೋಲ್ಕತ್ತಾ ಪರ ಪಿ. ಕೃಷ್ಣ 3, ಸುನೀಲ್ ನರೈನ್ 2 ವಿಕೆಟ್ ಪಡೆದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.