ಕೊಹ್ಲಿ ಪಡೆಯನ್ನು ಮಣಿಸಿ ಸತತ ಗೆಲುವಿನ ಓಟ ಮುಂದೂವರೆಸಿದ ಡೆಲ್ಲಿ ಕ್ಯಾಪಿಟಲ್ಸ್!
ಯುವ ಆಟಗಾರ ಪೃಥ್ವಿ ಶಾ(42) ಹಾಗೂ ಮಾರ್ಕಸ್ ಸ್ಟೋಯಿನಿಸ್(ಅಜೇಯ 53) ಅದ್ಭುತ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ 13ನೇ ಆವೃತ್ತಿ ಐಪಿಎಲ್ ನ 19ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.

ದುಬೈ: ಯುವ ಆಟಗಾರ ಪೃಥ್ವಿ ಶಾ(42) ಹಾಗೂ ಮಾರ್ಕಸ್ ಸ್ಟೋಯಿನಿಸ್(ಅಜೇಯ 53) ಅದ್ಭುತ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ 13ನೇ ಆವೃತ್ತಿ ಐಪಿಎಲ್ ನ 19ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಡೆಲ್ಲಿ 20 ಓವರ್ ಗಳಲ್ಲಿ 4 ವಿಕೆಟ್ ಗೆ 196 ರನ್ ಸೇರಿಸಿತು. ಪೃಥ್ವಿ ಶಾ 42, ಶಿಖರ್ ಧವನ್ 32, ರಿಷಬ್ ಪಂತ್ 37, ಶಿಮ್ರಾನ್ ಹೆಟ್ಮರ್ ಅಜೇಯ 11 ರನ್ ಗಳಿಸಿದ್ದರು. ಆರ್ಸಿಬಿ ಪರ ಬೌಲಿಂಗ್ ಮೊಹಮ್ಮದ್ ಸಿರಾಜ್ 2, ಮೋಹಿನ್ ಅಲಿ ಹಾಗೂ ಇಸುರು ಉದಾನ್ ತಲಾ 1 ವಿಕೆಟ್ ಪಡೆದಿದ್ದಾರೆ.
197 ರನ್ ಗಳ ಗುರಿ ಬೆನ್ನಟ್ಟಿರುವ ಕೊಹ್ಲಿ ಪಡೆ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ ಸಿಡಿಸಲಷ್ಟೇ ಸಾಧ್ಯವಾಯಿತು. ಇದರೊಂದಿಗೆ 59 ರನ್ ಗಳಿಂದ ಡೆಲ್ಲಿ ತಂಡಕ್ಕೆ ಶರಣಾಗಿದೆ.
ಆರ್ ಸಿಬಿ ಪರ ಆರೋನ್ ಪಿಂಚ್ 13, ವಿರಾಟ್ ಕೊಹ್ಲಿ 43, ಮೊಹಿನ್ ಅಲಿ 11, ವಾಷಿಂಗ್ಟನ್ ಸುಂದರ್ 17, ನವದೀಪ್ ಸೈನಿ ಅಜೇಯ 12 ರನ್ ಬಾರಿಸಿದ್ದಾರೆ.
ಡೆಲ್ಲಿ ಪರ ಬೌಲಿಂಗ್ ನಲ್ಲಿ ಕಾಗಿಸೋ ರಬಾಡ 4, ಅನ್ ರಿಚ್ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


