2ನೇ ಏಕದಿನ ಪಂದ್ಯ: ಭಾರತದ ವಿರುದ್ಧ ಟಾಸ್ ಗೆದ್ದ ಆಸಿಸ್ ಬ್ಯಾಟಿಂಗ್, ಭರ್ಜರಿ ಆರಂಭ
ಮೊದಲ ಪಂದ್ಯದ ಗೆಲುವಿನ ಹುಮ್ಮಸ್ಸಿನಲ್ಲೇ ಕಣಕ್ಕಿಳಿದಿರುವ ಆಸ್ಟ್ರೇಲಿಯಾ ತಂಡ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಸಿಡ್ನಿ: ಮೊದಲ ಪಂದ್ಯದ ಗೆಲುವಿನ ಹುಮ್ಮಸ್ಸಿನಲ್ಲೇ ಕಣಕ್ಕಿಳಿದಿರುವ ಆಸ್ಟ್ರೇಲಿಯಾ ತಂಡ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಇಂದಿನಿಂದ ಆರಂಭವಾಗಿರುವ ಏಕದಿನ ಸರಣಿಯಲ್ಲಿ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆಸಿಸ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ 2ನೇ ಏಕದಿನ ಪಂದ್ಯ ಆರಂಭವಾಗಿದ್ದು ಟಾಸ್ ಗೆದ್ದ ಆಸಿಸ್ ನಾಯಕ ಆ್ಯರೋನ್ ಫಿಂಚ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಬ್ಯಾಟಿಂಗ್ ಆರಂಭಿಸಿರುವ ಆಸ್ಟ್ರೇಲಿಯಾ ತಂಡ ರಕ್ಷಣಾತ್ಮಕ ಆಟ ನಡೆಸಿದ್ದು, ಆಸಿಸ್ ಪರ ಕ್ರೀಸ್ ಗೆ ಆಗಮಿಸಿರುವ ಡೇವಿಡ್ ವಾರ್ನರ್ ಮತ್ತು ನಾಯಕ ಫಿಂಚ್ ಎಚ್ಚರಿಕೆಯ ಆಟವಾಡುತ್ತಿದ್ದಾರೆ. ಇತ್ತೀಚಿನ ವರದಿಗಳು ಬಂದಾಗ 9.2 ಓವರ್ ಗೆ ಆಸಿಸ್ ಪಡೆ ವಿಕೆಟ್ ನಷ್ಟವಿಲ್ಲದೇ 6.00 ರವ್ ಸರಾಸರಿಯಲ್ಲಿ 56 ರನ್ ಗಳಿಸಿದೆ. 33 ಎಸೆತದಲ್ಲಿ 37 ರನ್ ಗಳಿಸಿರುವ ಡೇವಿಡ್ ವಾರ್ನರ್ ಮತ್ತು 24 ಎಸೆತಗಳಲ್ಲಿ 17 ರನ್ ಗಳಿಸಿರುವ ಫಿಂಚ್ ಕ್ರೀಸ್ ಕಾಯ್ದುಕೊಂಡಿದ್ದಾರೆ.
ತಂಡಗಳು ಇಂತಿವೆ
ಭಾರತ (ಪ್ಲೇಯಿಂಗ್ ಇಲೆವೆನ್ ): 1 ಶಿಖರ್ ಧವನ್, 2 ಮಾಯಾಂಕ್ ಅಗರ್ವಾಲ್, 3 ವಿರಾಟ್ ಕೊಹ್ಲಿ (ಕ್ಯಾಪ್ಟನ್), 4 ಶ್ರೇಯಸ್ ಅಯ್ಯರ್, 5 ಕೆಎಲ್ ರಾಹುಲ್ (ವಾರ), 6 ಹಾರ್ದಿಕ್ ಪಾಂಡ್ಯ, 7 ರವೀಂದ್ರ ಜಡೇಜಾ, 8 ನವದೀಪ್ ಸೈನಿ, 9 ಮೊಹಮ್ಮದ್ ಶಮಿ, 10 ಜಸ್ಪ್ರೀತ್ ಬುಮ್ರಾ, 11 ಯುಜ್ವೇಂದ್ರ ಚಹಲ್
ಆಸ್ಟ್ರೇಲಿಯಾ (ಪ್ಲೇಯಿಂಗ್ ಇಲೆವೆನ್ ): 1 ಡೇವಿಡ್ ವಾರ್ನರ್, 2 ಆರನ್ ಫಿಂಚ್ (ಕ್ಯಾಪ್ಟನ್), 3 ಸ್ಟೀವನ್ ಸ್ಮಿತ್, 4 ಮಾರ್ನಸ್ ಲ್ಯಾಬುಸ್ಚಾಗ್ನೆ, 5 ಮೊಯಿಸಸ್ ಹೆನ್ರಿಕ್ಸ್, 6 ಅಲೆಕ್ಸ್ ಕ್ಯಾರಿ (ವಾರ), 7 ಗ್ಲೆನ್ ಮ್ಯಾಕ್ಸ್ ವೆಲ್, 8 ಪ್ಯಾಟ್ ಕಮ್ಮಿನ್ಸ್, 9 ಮಿಚೆಲ್ ಸ್ಟಾರ್ಕ್, 10 ಆಡಮ್ ಜಂಪಾ, 11 ಜೋಶ್ ಹೇಜಲ್‌ವುಡ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


