ಕ್ರಿಕೆಟ್ ಅಭಿಮಾನಿಗಳ ಚಿತ್ತ ಐಪಿಎಲ್ ಮೇಲಿದ್ದರೆ, ಅತ್ತ ನ್ಯೂಜಿಲೆಂಡ್ ನಲ್ಲಿ ನಡೆಯಿತು ಕ್ರಿಕೆಟ್ ಲೋಕದ ಅಚ್ಚರಿಯ ಸನ್ನಿವೇಶ!
ಜಗತ್ತಿನ ಕ್ರಿಕೆಟ್ ಅಭಿಮಾನಿಗಳು ಇತ್ತ ಐಪಿಎಲ್ ನಲ್ಲಿ ಬಿಸಿಯಾಗಿದ್ದರೆ ಅತ್ತ ನ್ಯೂಜಿಲೆಂಡ್ ದೇಸೀ ಕ್ರಿಕೆಟ್ ನಲ್ಲಿ ಕ್ರಿಕೆಟ್ ಲೋಕದ ಅತ್ಯಂತ ವಿಲಕ್ಷಣ ಔಟ್ ವೊಂದು ವರದಿಯಾಗಿದೆ.

ವೆಲ್ಲಿಂಗ್ಟನ್: ಜಗತ್ತಿನ ಕ್ರಿಕೆಟ್ ಅಭಿಮಾನಿಗಳು ಇತ್ತ ಐಪಿಎಲ್ ನಲ್ಲಿ ಬಿಸಿಯಾಗಿದ್ದರೆ ಅತ್ತ ನ್ಯೂಜಿಲೆಂಡ್ ದೇಸೀ ಕ್ರಿಕೆಟ್ ನಲ್ಲಿ ಕ್ರಿಕೆಟ್ ಲೋಕದ ಅತ್ಯಂತ ವಿಲಕ್ಷಣ ಔಟ್ ವೊಂದು ವರದಿಯಾಗಿದೆ.
ಹೌದು.. ನ್ಯೂಜಿಲೆಂಡ್ನಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯವೊಂದರಲ್ಲಿ ಯಾರೂ ಊಹಿಸಲಾಗದ ಘಟನೆಯೊಂದು ನಡೆದಿದೆ. ಓಟೆಜ್ ವಿರುದ್ಧ ನಡೆದ ಪಂದ್ಯದಲ್ಲಿ ವೆಲ್ಲಿಂಗ್ಟನ್ ತಂಡದ ಬ್ಯಾಟ್ಸ್ಮನ್ ಬ್ಲಂಡೆಲ್ ಶತಕ ಸಿಡಿಸಿ ಬ್ಯಾಟಿಂಗ್ ನಡೆಸುತ್ತಿದ್ದರು. ಈ ಸಂದರ್ಭ ಬೌಲರ್ ಜೇಕಬ್ ಡಫ್ಫಿ ಎಸೆತದಲ್ಲಿ ಬ್ಲಂಡೆಲ್ ಅವರು ಚೆಂಡನ್ನು ಜಸ್ಟ್ ಬ್ಯಾಟ್ಗೆ ಟಚ್ ಮಾಡಿದರು. ಚೆಂಡು ನಿಧಾನವಾಗಿ ವಿಕೆಟ್ ಕಡೆ ತೆರಳಿತು. ಈವೇಳೆ ಬ್ಯಾಟ್ಸ್ಮನ್ ಚೆಂಡು ವಿಕೆಟ್ಗೆ ತಾಗುವುದನ್ನು ತಡೆಯಲು ಮೊದಲು ಕಾಲಿನಿಂದ ಇತ್ತಕಡೆ ತಳ್ಳಿದರು. ಆದರೆ, ಚೆಂಡು ಮೇಲೆ ಹೋಗಿ ಮತ್ತೆ ವಿಕೆಟ್ಗೆ ಬೀಳುವುದರಲ್ಲಿತ್ತು. ಈ ಸಂದರ್ಭ ಮೈಮರೆತ ಬ್ಯಾಟ್ಸ್ಮನ್ ಚೆಂಡನ್ನು ಕೈಯಲ್ಲಿ ಹಿಡಿದು ಕ್ರಿಕೆಟ್ ನಿಯಮದ ವಿರುದ್ಧ ನಡೆದರು.
ಪರಿಣಾಮ ಬ್ಲಂಡೆಲ್ ಔಟ್ ಎಂದು ತೀರ್ಮಾನಿಸಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಬೇಕಾಯಿತು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 60 ವರ್ಷದ ಹಿಂದೆ ನ್ಯೂಜಿಲೆಂಡ್ನ ಜಾನ್ ಹಯೆಸ್ ಇದೇ ರೀತಿ ಔಟ್ ಆಗಿದ್ದರು. ಆ ಬಳಿಕ ಕಿವೀಸ್ ಆಟಗಾರ ಒಬ್ಬ ಹೀಗೆ ಔಟ್ ಆಗಿದ್ದು ಇದೇ ಮೊದಲ ಬಾರಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


