ಬೌಂಡರಿ ಲೈನ್ ನಲ್ಲಿ ಅದ್ಬುತ ಡೈವ್ ಹೊಡೆದು ಚೆಂಡನ್ನು ತಡೆದ ಥೈಲ್ಯಾಂಡ್ ಆಟಗಾರ್ತಿ: ವಿಡಿಯೋ
ಟಿ-20 ಮಹಿಳಾ ಚಾಲೆಂಜ್ ಪಂದ್ಯದಲ್ಲಿ ಟ್ರೇಲ್ ಬ್ಲೇಜರ್ ತಂಡದಲ್ಲಿ ಆಡಿದ ಏಕೈಕ ಥೈಲ್ಯಾಂಡ್ ಆಟಗಾರ್ತಿ ನಟ್ಟಕನ್ ಚಾಂಟಮ್, ಮಹತ್ವದ ಮೂರು ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದಾರೆ.

ಶಾರ್ಜಾ: ಟಿ-20 ಮಹಿಳಾ ಚಾಲೆಂಜ್ ಪಂದ್ಯದಲ್ಲಿ ಟ್ರೇಲ್ ಬ್ಲೇಜರ್ ತಂಡದಲ್ಲಿ ಆಡಿದ ಏಕೈಕ ಥೈಲ್ಯಾಂಡ್ ಆಟಗಾರ್ತಿ ನಟ್ಟಕನ್ ಚಾಂಟಮ್, ಮಹತ್ವದ ಮೂರು ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದಾರೆ.
ಬೌಂಡರಿ ಲೈನ್ ನಲ್ಲಿ ನಿಂತು ಅದ್ಬುತ ಡೈವ್ ಹೊಡೆಯುವ ಮೂಲಕ ಚೆಂಡನ್ನು ತಡೆದಿದ್ದಾರೆ. ಇದರಿಂದಾಗಿ ಸೂಪರ್ ನೋವಾಸ್ ವಿರುದ್ಧದ ಪೈನಲ್ ಪಂದ್ಯದಲ್ಲಿ ತಮ್ಮ ತಂಡ ಗೆಲಲ್ಲು ಕಾರಣರಾಗಿದ್ದಾರೆ.
ಶಾರ್ಜಾದ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 20 ಓವರ್ ಗಳ ಪಂದ್ಯದಲ್ಲಿ ಟ್ರೇಲ್ ಬ್ಲೇಜರ್ ನೀಡಿದ 119 ರನ್ ಗಳ ಸುಲಭ ಗುರಿ ಬೆನ್ನತ್ತಿದ್ದ ಸೂಪರ್ ನೋವಾಸ್ ತಂಡದ ಬೌಂಡರಿಯೊಂದನ್ನು ನಟ್ಟಕನ್ ಚಾಂಟಮ್ ಅದ್ಬುತ ಡೈವ್ ಹೊಡೆಯುವ ಮೂಲಕ ತಡೆದು ತಮ್ಮ ತಂಡಕ್ಕೆ ಎರಡು ರನ್ ಗಳನ್ನು ರಕ್ಷಿಸಿದರು. ಅಂತಿಮವಾಗಿ ಸೂಪರ್ ನೋವಾಸ್ ತಂಡ ಸೋತು ಟ್ರೇಲ್ ಬ್ಲೇಜರ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ನಟ್ಟಕನ್ ಚಾಂಟಮ್ ಅವರ ಅದ್ಬುತ್ ಡೈವ್ ಹೊಡೆಯುವ ವಿಡಿಯೋ ವೈರಲ್ ಆಗಿದ್ದು, ಇಂಗ್ಲೆಂಡಿನ ಕಾಟೆ ಕ್ರಾಸ್ ರಂತಹ ಸಮಕಾಲೀನ ಆಟಗಾರರು ಸೇರಿದಂತೆ ಹಲವು ಮಂದಿ ನಟ್ಟಕನ್ ಅವರನ್ನು ಮನಸಾರೆ ಹೊಗಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


