ಬಾಬರ್ ಅಜಮ್ ಸಹ ಕೊಹ್ಲಿ, ಸ್ಮಿತ್ ರಂತೆ ವಿಶ್ವದರ್ಜೆ ಆಟಗಾರ: ಮಿಸ್ಬಾ ಉಲ್ ಹಕ್
ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಅವರು ಸಹ ವಿಶ್ವ ದರ್ಜೆಯ ಆಟಗಾರರಾಗಿದ್ದು, ಅವರು ಸಹ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರಂತೆ ಒಂದೇ ಲೀಗ್ ನಲ್ಲಿರಲು ಸಮರ್ಥರಾಗಿದ್ದಾರೆ ಎಂದು ಪಾಕಿಸ್ತಾನ ತಂಡದ ಮುಖ್ಯ ಕೋಚ್ ಹಾಗೂ ಮುಖ್ಯ ಆಯ್ಕೆದಾರ ಮಿಸ್ಲಾ ಉಲ್ ಹಕ್ ಅವರು ಹೇಳಿದ್ದಾರೆ.

ಕರಾಚಿ: ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಅವರು ಸಹ ವಿಶ್ವ ದರ್ಜೆಯ ಆಟಗಾರರಾಗಿದ್ದು, ಅವರು ಸಹ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರಂತೆ ಒಂದೇ ಲೀಗ್ ನಲ್ಲಿರಲು ಸಮರ್ಥರಾಗಿದ್ದಾರೆ ಎಂದು ಪಾಕಿಸ್ತಾನ ತಂಡದ ಮುಖ್ಯ ಕೋಚ್ ಹಾಗೂ ಮುಖ್ಯ ಆಯ್ಕೆದಾರ ಮಿಸ್ಲಾ ಉಲ್ ಹಕ್ ಅವರು ಹೇಳಿದ್ದಾರೆ.
"ನಾನು ಒಬ್ಬರನ್ನು ಮತ್ತೊಬ್ಬರಿಗೆ ಹೋಲಿಕೆ ಮಾಡುವುದನ್ನು ಇಷ್ಟಪಡುವುದಿಲ್ಲ. ಆದರೆ ಬಾಬರ್ ಪ್ರಸ್ತುತ ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್ ಅಥವಾ ಜೋ ರೂಟ್ ಅವರ ದರ್ಜೆಯಲ್ಲಿರಲು ತುಂಬಾ ಹತ್ತಿರದಲ್ಲಿದ್ದಾರೆ" ಎಂದು ಮಿಸ್ಬಾ ಯುಟ್ಯೂಬ್ ಚಾನೆಲ್ ಕ್ರಿಕೆಟ್ ಬಾಜ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
"ಬಾಬರ್ ಅವರು ಕೋಹ್ಲಿಯಂತೆ ಉತ್ತಮ ಆಟಗಾರನಾಗಲು ತಮ್ಮ ಕೌಶಲ್ಯ, ಫಿಟ್ನೆಸ್ ಮತ್ತು ಆಟದಲ್ಲಿ ಅವರಿಗಿಂತ ಹೆಚ್ಚು ಶ್ರಮಿಸಬೇಕು ಎಂಬ ನೀತಿಯನ್ನು ನಂಬುತ್ತಾರೆ" ಎಂದು ಮಿಸ್ಬಾ ತಿಳಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದ ಆಸ್ಟ್ರೇಲಿಯಾ ಸರಣಿಗೆ ಮುಂಚಿತವಾಗಿ ಪಾಕಿಸ್ತಾನ ಟಿ- 20 ತಂಡದ ನಾಯಕನಾಗಿ ಆಯ್ಕೆಯಾಗಿದ್ದ 25 ವರ್ಷದ ಬಾಬರ್, ಇತ್ತೀಚೆಗಷ್ಟೇ ಏಕದಿನ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


