ನನ್ನ ಬಯೋಪಿಕ್ ನಲ್ಲಿ ಸಲ್ಮಾನ್ ಖಾನ್ ನಟಿಸಬೇಕು: ಶೋಯೆಬ್ ಅಖ್ತರ್ ಆಸೆ
ಟೀಂ ಇಂಡಿಯಾದ ಬೌಲಿಂಗ್ ಕೋಚ್ ಆಗಬೇಕೆಂಬ ಕನಸಿದೆ ಎಂದು ಹೇಳಿಕೊಂಡಿದ್ದ ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್ ಇದೀಗ ತಮ್ಮ ಬಯೋಪಿಕ್ ನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ನಟಿಸಬೇಕು ಎಂದು ಹೇಳಿದ್ದಾರೆ.

ಲಾಹೋರ್: ಟೀಂ ಇಂಡಿಯಾದ ಬೌಲಿಂಗ್ ಕೋಚ್ ಆಗಬೇಕೆಂಬ ಕನಸಿದೆ ಎಂದು ಹೇಳಿಕೊಂಡಿದ್ದ ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್ ಇದೀಗ ತಮ್ಮ ಬಯೋಪಿಕ್ ನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ನಟಿಸಬೇಕು ಎಂದು ಹೇಳಿದ್ದಾರೆ.
ರಾವಲ್ ಪಿಂಡಿ ಎಕ್ಸ್ ಪ್ರೆಸ್ ಎಂದೇ ಖ್ಯಾತಿ ಗಳಿಸಿರುವ ಶೋಯೆಬ್ ಅಖ್ತರ್ ಅವರು ತಮ್ಮ ಕ್ರಿಕೆಟ್ ಬದುಕನ್ನು ಸಿನಿಮಾ ಮಾಡುವುದಾದರೆ 54 ವರ್ಷದ ಸಲ್ಮಾನ್ ಖಾನ್ ಅವರು ಲೀಡ್ ರೋಲ್ ಮಾಡಬೇಕು ಎಂಬ ಆಸೆ ಇದೆ ಎಂದು ಹೇಳಿದರು.
ನಾನು ಸಲ್ಮಾನ್ ಖಾನ್ ಅವರ ಅಭಿಮಾನಿ. ಇನ್ನು 2016ರಲ್ಲಿ ನಾನು ಬಾಲಿವುಡ್ ನಟನನ್ನು ದುಬೈನಲ್ಲಿ ಭೇಟಿಯಾಗಿದ್ದೆ. "ದುಬೈನಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ನನ್ನ ಸಮಯವನ್ನು ನಾನು ನಿಜವಾಗಿಯೂ ಆನಂದಿಸಿದೆ. ಅವರ ಬೀಯಿಂಗ್ ಹ್ಯೂಮನ್ ಫೌಂಡೇಶನ್‌ನಿಂದ ದೊಡ್ಡ ಕೆಲಸಗಳು ಮಾಡುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರ ಜೀವನಾಧಾರಿತ ಚಿತ್ರ ಬಿಡುಗಡೆಯಾಗಿ ಯಶಸ್ವಿಯಾಗಿತ್ತು. ಇದಾದ ನಂತರ ಹಲವು ಕ್ರಿಕೆಟಿಗರ ಜೀವನಾಧಾರಿತ ಚಿತ್ರಗಳು ಬಂದರೂ ಅಷ್ಟೇನು ಯಶಸ್ಸು ಕಾಣಲಿಲ್ಲ. ಇದೀಗ ಟೀಂ ಇಂಡಿಯಾದ 1983ರಲ್ಲಿ ಮೊದಲ ಬಾರಿಗೆ ಐತಿಹಾಸಿಕ ವಿಶ್ವಕಪ್ ಗೆದ್ದಿದ್ದ ಘಟನೆ ಚಿತ್ರವಾಗಿ ನಿರ್ಮಾಣವಾಗಿದ್ದು ಕೊರೋನಾ ಲಾಕ್ ಡೌನ್ ನಿಂದಾಗಿ ಚಿತ್ರ ಮುಂದಕ್ಕೆ ಹೋಗಿದೆ.
ಅಖ್ತರ್ 46 ಟೆಸ್ಟ್ ಮತ್ತು 163 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು ಕ್ರಮವಾಗಿ 178 ಮತ್ತು 247 ವಿಕೆಟ್ಗಳನ್ನು ಗಳಿಸಿದರು. ಅಲ್ಲದೆ, ಅವರು ಮೆನ್ ಇನ್ ಗ್ರೀನ್ ಪರ 15 ಟಿ20 ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ ಅವರು 19 ವಿಕೆಟ್ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


