ಹರ್ಭಜನ್ ಸಿಂಗ್ ಆಲ್ ಟೈಂ ಬೆಸ್ಟ್ ಟೆಸ್ಟ್ ತಂಡದಲ್ಲಿ ದಾದಾ, ಧೋನಿ, ಕೊಹ್ಲಿಗಿಲ್ಲ ಸ್ಥಾನ!
ಟರ್ಬನೇಟರ್ ಹರ್ಭಜನ್ ಸಿಂಗ್ ಅವರನ್ನು ಭಾರತದ ಸರ್ವಶ್ರೇಷ್ಠ ಆಫ್ ಸ್ಪಿನ್ ಬೌಲರ್ ಗಳಲ್ಲಿ ಒಬ್ಬರು. ಬಹುದಿನಗಳಿಂದ ಇವರು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿಲ್ಲ. ಆದರೆ, ದೇಶಿಯ ಕ್ರಿಕೆಟ್ ನಲ್ಲಿ ಭಜ್ಜಿ ತಮ್ಮ ಸ್ಥಿರ ಪ್ರದರ್ಶನ ಮುಂದುವರಿಸಿದ್ದಾರೆ.

ಮುಂಬೈ: ಟರ್ಬನೇಟರ್ ಹರ್ಭಜನ್ ಸಿಂಗ್ ಅವರನ್ನು ಭಾರತದ ಸರ್ವಶ್ರೇಷ್ಠ ಆಫ್ ಸ್ಪಿನ್ ಬೌಲರ್ ಗಳಲ್ಲಿ ಒಬ್ಬರು. ಬಹುದಿನಗಳಿಂದ ಇವರು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿಲ್ಲ. ಆದರೆ, ದೇಶಿಯ ಕ್ರಿಕೆಟ್ ನಲ್ಲಿ ಭಜ್ಜಿ ತಮ್ಮ ಸ್ಥಿರ ಪ್ರದರ್ಶನ ಮುಂದುವರಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ನಲ್ಲಿ ಆಡುತ್ತಿರುವ ಹರ್ಭಜನ್ ಸಿಂಗ್ ಆಡುತ್ತಿದ್ದಾರೆ.
ಹರ್ಭಜನ್ ಸಿಂಗ್ 103 ಟೆಸ್ಟ್ ಪಂದ್ಯಗಳಲ್ಲಿ 417 ವಿಕೆಟ್ ಪಡೆದು ಬೀಗಿದ್ದಾರೆ. ಅವರು ತಮ್ಮ ಕನಸಿನ ಟೆಸ್ಟ್ ತಂಡವನ್ನು ಪ್ರಕಟಿಸಿದ್ದಾರೆ. ಅಚ್ಚರಿಯ ವಿಷಯವೆಂದರೆ ಭಜ್ಜಿ ತಂಡದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಈ ತಂಡದಲ್ಲಿ ಸ್ಥಾನ ನೀಡಿಲ್ಲ. ಅಲ್ಲದೆ ದಾದಾ ಖ್ಯಾತಿಯ ಸೌರವ್ ಗಂಗೂಲಿ ಅವರಿಗೂ ಸ್ಥಾನ ನೀಡಿಲ್ಲ. ಸದ್ಯ ವಿಶ್ವದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರಿಗೂ ತಂಡದಲ್ಲಿ ಸ್ಥಾನ ಪಡೆದಿಲ್ಲ.
ಉಳಿದಂತೆ ಹರ್ಭಜನ್ ಸಿಂಗ್ ಅವರ ಕನಸಿನ ತಂಡದಲ್ಲಿ ಮೂವರು ಭಾರತೀಯರು ಸ್ಥಾನ ಪಡೆದಿದ್ದಾರೆ. ಕ್ರಿಕೆಟ್ ದಿಗ್ಗಜ್ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ತಂಡ: ವೀರೇಂದ್ರ ಸೆಹ್ವಾಗ್, ಮ್ಯಾಥ್ಯೂ ಹೆಡನ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಜ್ಯಾಕ್ ಕಾಲಿಸ್, ರಿಕ್ಕಿ ಪಾಂಟಿಂಗ್, ಕುಮಾರ್ ಸಂಗಕ್ಕಾರ, ಶಾನ್ ಪೋಲಾಕ್, ಶೆನ್ ವಾರ್ನ್, ವಾಸೀಮ್ ಅಕ್ರಮ್, ಗ್ಲೇನ್ ಮೆಕ್ ಗ್ರಾತ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


