ಕೊಹ್ಲಿ ಅದ್ಭುತ ಆಟಗಾರ, ಆಹರ್ನಿಶಿ ಟೆಸ್ಟ್ ಆಸೀಸ್ ಗೆ ಅನುಕೂಲ: ಸ್ಟೀವನ್ ಸ್ಮಿತ್
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅದ್ಭುತ ಆಟಗಾರ ಎಂದು ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವನ್ ಸ್ಮಿತ್ ಹೇಳಿದ್ದಾರೆ.

ಮುಂಬೈ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅದ್ಭುತ ಆಟಗಾರ ಎಂದು ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವನ್ ಸ್ಮಿತ್ ಹೇಳಿದ್ದಾರೆ.
ಸ್ಮಿತ್ ಮತ್ತು ಕೊಹ್ಲಿ ಪ್ರಸ್ತುತ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಕ್ರಮವಾಗಿ ಮೊದಲೆರೆಡು ಸ್ಥಾನಗಳನ್ನು ಹೊಂದಿದ್ದಾರೆ. ಇಬ್ಬರು ಬ್ಯಾಟಿಂಗ್ ಸ್ಥಿರತೆಯನ್ನು ಹೊಂದಿದ್ದಾರೆ. ಕ್ರಿಕೆಟಿಗನಾಗಿ ಸುಧಾರಿಸಲು ಕೊಹ್ಲಿ ಅವರ ಮನಸ್ಥಿತಿ ಮತ್ತು ಆಟದ ಬಗೆಗಿನ ಅವರ ಉತ್ಸಾಹವು ಭಾರತೀಯ ಕ್ರಿಕೆಟ್ ಅನ್ನು ಉತ್ತಮಗೊಳಿಸಿದೆ ಎಂದು ಸ್ಮಿತ್ ಭಾವಿಸಿದ್ದಾರೆ.
ಮುಂಬರುವ ಡಿಸೆಂಬರ್ ನಲ್ಲಿ ಉಭಯ ತಂಡಗಳು ಹಗಲು-ರಾತ್ರಿ ಟೆಸ್ಟ್ ನಲ್ಲಿ ಎದುರಾಗುವ ವೇಳೆ ಭಾರತಕ್ಕಿಂತ ಹೆಚ್ಚು ಗುಲಾಬಿ ಚೆಂಡು ಆಟಗಳನ್ನು ಆಡಿದ ಅನುಭವ ಹೊಂದಿರುವ ಆಸ್ಟ್ರೇಲಿಯಾ ತಂಡಕ್ಕೆ ಸ್ವಲ್ಪ ಲಾಭವಾಗಲಿದ್ದು, ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡದ ಸವಾಲಿಗೆ ಆಸೀಸ್ ಸಜ್ಜಾಗಿದೆ ಎಂದು ಸ್ಟಾರ್ ಬ್ಯಾಟ್ಸ್ ಮನ್ ಸ್ಟೀವ್ ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ.
ತವರಿನಲ್ಲಿ ಭಾರತ ಎದುರಿನ ನಾಲ್ಕು ಟೆಸ್ಟ್ , ಮೂರು ಏಕದಿನ ಮತ್ತು ಮೂರು ಟಿ20 ಒಳಗೊಂಡ ಸಮಗ್ರ ಸರಣಿಯನ್ನು ವೇಳಾಪಟ್ಟಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಕಳೆದ ವಾರ ಪ್ರಕಟಿಸಿದೆ. ಸರಣಿಯ ದ್ವಿತೀಯ ಟೆಸ್ಟ್ ಹಾಗೂ ಹೊನಲು-ಬೆಳಕಿನ ಟೆಸ್ಟ್ ಪಂದ್ಯ ಅಡಿಲೇಡ್ ನಲ್ಲಿ ಡಿಸೆಂಬರ್ 11ರಿಂದ ಆರಂಭವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


