ಮೈದಾನದ ಅಂಪೈರ್ ಔಟ್ ಕೊಟ್ರೂ ಸ್ಮೃತಿ ಮಂದಾನಗೆ ಜೀವದಾನ ಕೊಟ್ಟ ಥರ್ಡ್ ಅಂಪೈರ್, ವಿಡಿಯೋ!
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ತ್ರಿರಾಷ್ಟ್ರ ಮಹಿಳಾ ಟಿ20 ಸರಣಿಯಲ್ಲಿ ಟೀಂ ಇಂಡಿಯಾದ ಸ್ಮೃತಿ ಮಂದಾನ ಔಟ್ ಎಂದು ಮೈದಾನದ ಅಂಪೈರ್ ತೀರ್ಪು ನೀಡಿದ್ದು ಆದರೆ ಥರ್ಡ್ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿ ಸ್ಮೃತಿಗೆ ಜೀವದಾನ ನೀಡಿದರು.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ತ್ರಿರಾಷ್ಟ್ರ ಮಹಿಳಾ ಟಿ20 ಸರಣಿಯಲ್ಲಿ ಟೀಂ ಇಂಡಿಯಾದ ಸ್ಮೃತಿ ಮಂದಾನ ಔಟ್ ಎಂದು ಮೈದಾನದ ಅಂಪೈರ್ ತೀರ್ಪು ನೀಡಿದ್ದು ಆದರೆ ಥರ್ಡ್ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿ ಸ್ಮೃತಿಗೆ ಜೀವದಾನ ನೀಡಿದರು.
ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸ್ಮೃತಿ ಮಂದಾನರ ಬ್ಯಾಟ್ ಗೆ ತಗುಲಿ ಚೆಂಡು ಕೀಪರ್ ಕೈಗೆ ಹೋಗಿತ್ತು. ಈ ವೇಳೆ ಇಂಗ್ಲೆಂಡ್ ಕೀಪರ್ ಆಮಿ ಎಲೆನ್ ಜೋನೆಸ್ ಕ್ಯಾಚ್ ಅನ್ನು ಕೈಚೆಲ್ಲಿದರು. ಆಮಿ ಹಿಮ್ಮುಖವಾಗಿದ್ದರಿಂದ ಅವರು ಕ್ಯಾಚ್ ಕೈಚೆಲ್ಲಿರುವುದು ಮೊದಲಿಗೆ ತಿಳಿಯಲಿಲ್ಲ. ಮೈದಾದ ಅಂಪೈರ್ ಸಹ ಔಟ್ ಎಂದು ತೀರ್ಪು ನೀಡಿದ್ದರು. ಬಳಿಕ ರಿಪ್ಲೆ ನೋಡಿದ ಥರ್ಡ್ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದರು.
ಈ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಿ 147 ರನ್ ಪೇರಿಸಿತ್ತು. 148 ರನ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಇನ್ನು ಮೂರು ಎಸೆತ ಇರುವಂತೆ 150 ರನ್ ಬಾರಿಸಿದ ಗೆಲುವಿನ ನಗೆ ಬೀರಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


