ಅಭಿಮಾನಿಗಳಿಗೆ ಅಜಿಂಕ್ಯ ರಹಾನೆ 'ವಡಾ ಪಾವ್' ಟ್ವೀಟ್, ಸಚಿನ್ ನನಗೆ ಕೆಂಪು ಚಟ್ನಿ ಬೇಕು ಅಂದಿದ್ದೇಕೆ?
ವಡಾ ಪಾವ್ ತಿನ್ನುವಾಗ ನಿಮ್ಮ ಆದ್ಯತೆಗಳು ಏನಾಗಿರುತ್ತದೆ ಎಂದು ಟೀಂ ಇಂಡಿಯಾದ ಉಪ ನಾಯಕ ಅಜಿಂಕ್ಯ ರಹಾನೆ ಅವರು ಟ್ವೀಟರ್ ನಲ್ಲಿ ತಮ್ಮ ಅಭಿಮಾನಿಗಳನ್ನು ಕೇಳಿದ್ದರೂ ಅದಕ್ಕೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸಹ ರೀಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮುಂಬೈ: ವಡಾ ಪಾವ್ ತಿನ್ನುವಾಗ ನಿಮ್ಮ ಆದ್ಯತೆಗಳು ಏನಾಗಿರುತ್ತದೆ ಎಂದು ಟೀಂ ಇಂಡಿಯಾದ ಉಪ ನಾಯಕ ಅಜಿಂಕ್ಯ ರಹಾನೆ ಅವರು ಟ್ವೀಟರ್ ನಲ್ಲಿ ತಮ್ಮ ಅಭಿಮಾನಿಗಳನ್ನು ಕೇಳಿದ್ದರೂ ಅದಕ್ಕೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸಹ ರೀಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ರಹಾನೆ ಕೈಯಲ್ಲಿ ವಡಾ ಪಾವ್ ಹಿಡಿದಿರುವ ಫೋಟೋವನ್ನು ಹಾಕಿ ಅದರ ಕೆಳಗೆ ವಡಾ ಪಾವ್ ಅನ್ನು ಹೇಗೆ ತಿನ್ನಲು ಇಷ್ಟಪಡುತ್ತೀರಾ ಎಂದು ಮೂರು ಆಯ್ಕೆಗಳನ್ನು ನೀಡಿದ್ದರು. 1. ವಡಾ ಪಾವ್ ಜೊತೆ ಟೀ, 2. ಚಟ್ನಿಯೊಂದಿಗೆ ವಡಾ ಪಾವ್, 3. ಕೇವಲ ವಡಾ ಪಾವ್ ತಿನ್ನುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಟ್ವೀಟ್ ಗೆ ಸಚಿನ್ ತೆಂಡೂಲ್ಕರ್ ಸಹ ಫಿದಾ ಆಗಿದ್ದು ನನ್ನ ವಡಾ ಪಾವ್ ಗೆ ಸ್ವಲ್ಪ ಪ್ರಮಾಣದಲ್ಲಿ ಕೆಂಪು ಚಟ್ನಿ ಇರಬೇಕು. ಇಲ್ಲವೇ ಹಸಿರು ಚಟ್ನಿ ಮತ್ತು ಕೆಲವು ಇಮ್ಲಿ ಚಟ್ನಿ ಹೊಂದಿರುವ ವಡಾ ಪಾವ್ ನ್ನು ನಾನು ತುಂಬಾ ಇಷ್ಟಪಡುತ್ತೇನೆ ಎಂದು ಸಚಿನ್ ತೆಂಡೂಲ್ಕರ್ ರಹಾನೆ ಟ್ವೀಟ್ ಗೆ ಉತ್ತರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


