ಕ್ರಿಕೆಟ್

ಪಾಕ್ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ ವೆಸ್ಟ್ ಇಂಡೀಸ್ ಕ್ರಿಕೆಟಿಗ ಡರೇನ್ ಸ್ಯಾಮಿ!

ವೆಸ್ಟ್ ಇಂಡೀಸ್ ಕ್ರಿಕೆಟಿಗ ಡರೇನ್ ಸ್ಯಾಮಿ ಪಾಕಿಸ್ತಾನದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

ಪಾಕ್ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ ವೆಸ್ಟ್ ಇಂಡೀಸ್ ಕ್ರಿಕೆಟಿಗ ಡರೇನ್ ಸ್ಯಾಮಿ!
Darren sammy
Published On :

ಇಸ್ಲಾಮಾಬಾದ್: ವೆಸ್ಟ್ ಇಂಡೀಸ್ ಕ್ರಿಕೆಟಿಗ ಡರೇನ್ ಸ್ಯಾಮಿ ಪಾಕಿಸ್ತಾನದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. 

ಪಾಕಿಸ್ತಾನದ ಸೂಪರ್ ಲೀಗ್(ಪಿಎಸ್ಎಲ್)ನಲ್ಲಿ ಮಿಂಚಿದ್ದರು. ಉದ್ಯಮಿ ಜಾವೆದ್ ಅಫ್ರಿದಿ ಮಾಲೀಕತ್ವದ ಪೇಶ್ವರ್ ಜಲ್ಮಿ ತಂಡದಲ್ಲಿ ಡ್ಯಾರೆನ್ ನಾಯಕರಾಗಿದ್ದಾರೆ. 

ಇನ್ನು ಡರೇನ್ ಸ್ಯಾಮಿಗೆ ಪಾಕ್ ಪೌರತ್ವ ಕೊಡಿಸುವ ಬಗ್ಗೆ ಮಾತನಾಡಿರುವ ಜಾವೆದ್, ನಾವು ಅವರಿಗೆ ಪಾಕಿಸ್ತಾನದ ಗೌರವ ಪೌರತ್ವಕ್ಕಾಗಿ ವಿನಂತಿಸಿದ್ದೇವೆ. ಈ ಸಂಬಂಧ ಅರ್ಜಿಯನ್ನು ಪಾಕಿಸ್ತಾನ ಅಧ್ಯಕ್ಷರಿಗೆ ನೀಡಿದ್ದೇವೆ. ಸ್ಯಾಮಿ ಪರ ಒಳ್ಳೆಯ ಮಾತುಗಳನ್ನು ಹೇಳಬೇಕೆಂದು ಪಿಸಿಬಿ ಅಧ್ಯಕ್ಷರಿಗೆ ವಿನಂತಿಸಿದ್ದೇವೆ. ಆದ್ದರಿಂದ ಗೌರವ ಪೌರತ್ವವನ್ನು ಅಧ್ಯಕ್ಷರು ಅನುಮೋದಿಸುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ. 

ಪಾಕ್ ಬಗ್ಗೆ ನನಗೆ ಅಪಾರ ಪ್ರೀತಿ ಇದೆ. ಇದು ನನ್ನ ಭಾವನೆ. ನನ್ನ ಬಳಿ ಪಾಸ್ ಪೋರ್ಟ್ ಇದೆಯೋ ಇಲ್ಲವೋ, ಈ ದೇಶಕ್ಕೆ ನನ್ನ ಕೊಡುಗೆ ಎಲ್ಲವನ್ನೂ ಒದಗಿಸುತ್ತದೆ ಎಂದು ಭಾವಿಸುತ್ತೇನೆ. ಈ ದೇಶದೊಂದಿಗೆ ನನ್ನನ್ನು ಸೇರಿಸಿಕೊಳ್ಳಲು ಪಾಸ್ ಪೋರ್ಟ್ ಅಗತ್ಯವಿಲ್ಲ ಎಂದು ಸ್ಯಾಮಿ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.