ಕ್ರಿಕೆಟ್

ಐಸಿಸಿ ಮಹಿಳಾ ಟಿ-20 ಶ್ರೇಯಾಂಕ: ಸ್ಮೃತಿ ಮಂಧಾನ ನಾಲ್ಕನೇ ಸ್ಥಾನಕ್ಕೆ ಏರಿಕೆ

ಐಸಿಸಿ ಮಹಿಳಾ ಟಿ-20 ಅಂತಾರಾಷ್ಟ್ರೀಯ ಬ್ಯಾಟಿಂಗ್ ವಿಭಾಗದ ಶ್ರೇಯಾಂಕ ಪ್ರಕಟವಾಗಿದ್ದು, ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಮೂರು ಸ್ಥಾನಗಳ ಜಿಗಿತದೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಆದರೆ, ಜೆಮಿಮಾ ರೊಡ್ರಿಗಸ್ ಏಳನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

ಐಸಿಸಿ ಮಹಿಳಾ ಟಿ-20 ಶ್ರೇಯಾಂಕ: ಸ್ಮೃತಿ ಮಂಧಾನ ನಾಲ್ಕನೇ ಸ್ಥಾನಕ್ಕೆ ಏರಿಕೆ
ಸ್ಮೃತಿ ಮಂಧಾನ
Published On :

ದುಬೈ: ಐಸಿಸಿ ಮಹಿಳಾ  ಟಿ-20 ಅಂತಾರಾಷ್ಟ್ರೀಯ ಬ್ಯಾಟಿಂಗ್ ವಿಭಾಗದ ಶ್ರೇಯಾಂಕ ಪ್ರಕಟವಾಗಿದ್ದು, ಭಾರತದ ಸ್ಟಾರ್ ಆಟಗಾರ್ತಿ  ಸ್ಮೃತಿ ಮಂಧಾನ ಮೂರು ಸ್ಥಾನಗಳ ಜಿಗಿತದೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಆದರೆ, ಜೆಮಿಮಾ ರೊಡ್ರಿಗಸ್  ಏಳನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಹರ್ಮನ್ ಪ್ರೀತ್ ಕೌರ್  9 ನೇ ಸ್ಥಾನದಲ್ಲಿಯೇ ಉಳಿದಿದ್ದಾರೆ.

ಬೌಲರ್ ಗಳ ಪಟ್ಟಿಯಲ್ಲಿ ಪೂನಂ ಯಾದವ್ ಟಾಪ್ 10ರಿಂದ ಹೊರಗುಳಿದಿದ್ದು, 12ನೇ ಸ್ಥಾನದಲ್ಲಿದ್ದಾರೆ. ನಂಬರ್ 3ರಲ್ಲಿರುವ ನ್ಯೂಜಿಲೆಂಡ್ ನ ಸೂಜೈ ಬ್ಯಾಟ್ಸ್  ಅದೇ ಸ್ಥಾನದಲ್ಲಿ ಉಳಿದಿದ್ದಾರೆ. ಕ್ಯಾಪ್ಟನ್ ಸೋಫಿ ಡಿವೈನ್ ನಂಬರ್ 2 ಸ್ಥಾನದಲ್ಲಿದ್ದಾರೆ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.

ಮೂರು ರಾಷ್ಟ್ರಗಳ ಸರಣಿಯಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ್ತಿ ಬೆಥ್ ಮೂನಿ ಹಾಗೂ ಮಂಧಾನ ಎರಡು ಅರ್ಧ ಶತಕಗಳನ್ನು ಬಾರಿಸಿದ್ದರು. ಈ  ಮಧ್ಯೆ ಮೆಗ್ ಲ್ಯಾನಿಂಗ್ ಮೊದಲ ಮೂರು ಸ್ಥಾನಗಳಿಂದ ಕೈಬಿಟ್ಟಿದ್ದರೂ  ಮೊದಲ ಐದರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.