ತ್ರಿಕೋನ ಮಹಿಳಾ ಟಿ-20: ಮಂದನಾ ಅರ್ಧಶತಕ ವ್ಯರ್ಥ, ಆಸೀಸ್ ಗೆ ಮಣಿದ ಭಾರತ
ಆರಂಭಿಕ ಆಟಗಾರ್ತಿ ಸ್ಮೃತಿ ಮಂದನಾ (66) ಅವರ ಅರ್ಧಶತಕದ ಹೊರತಾಗಿಯೂ, ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಬುಧವಾರ ನಡೆದ ಟ್ರೈ-ವುಮೆನ್ ಟಿ 20 ಕ್ರಿಕೆಟ್ ಸರಣಿಯ ಫೈನಲ್ ಪಂದ್ಯದಲ್ಲಿ ಭಾರತ 11 ರನ್‌ಗಳ ಸೋಲು ಕಂಡಿದೆ.

ಮೆಲ್ಬೋರ್ನ್: ಆರಂಭಿಕ ಆಟಗಾರ್ತಿ ಸ್ಮೃತಿ ಮಂದನಾ (66) ಅವರ ಅರ್ಧಶತಕದ ಹೊರತಾಗಿಯೂ, ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಬುಧವಾರ ನಡೆದ ಟ್ರೈ-ವುಮೆನ್ ಟಿ 20 ಕ್ರಿಕೆಟ್ ಸರಣಿಯ ಫೈನಲ್ ಪಂದ್ಯದಲ್ಲಿ ಭಾರತ 11 ರನ್‌ಗಳ ಸೋಲು ಕಂಡಿದೆ.
ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಗೆ 155 ರನ್ ಕಲೆ ಹಾಕಿತು. ಗುರಿಯನ್ನು ಹಿಂಬಾಲಿಸಿದ ಭಾರತ 20 ಓವರ್ ಗಳಲ್ಲಿ 144 ರನ್‌ಗಳಿಗೆ ಆಲೌಟ್ ಆಗಿ ಸೋಲು ಕಂಡಿತು.
ಮಂದನಾ ಹೊರತುಪಡಿಸಿ, ಭಾರತದ ಇತರ ಬ್ಯಾಟ್ಸ್‌ಮನ್‌ಗಳಿಗೆ ಕ್ರೀಸ್ ನಲ್ಲಿ ತಳವೂರಲು ಸಾಧ್ಯವಾಗಲಿಲ್ಲ. ಮಂದನಾ 37 ಎಸೆತಗಳಲ್ಲಿ 12 ಬೌಂಡರಿಗಳೊಂದಿಗೆ 66 ರನ್ ಗಳಿಸಿದರು. ಅವರು 15 ನೇ ಓವರ್‌ನಲ್ಲಿ 115 ರನ್ ಆಗಿದ್ದಾಗ ನಾಲ್ಕನೇ ವಿಕೆಟ್ ರೂಪದಲ್ಲಿ ಔಟ್ ಆದರು. ನಂತರದ ಬ್ಯಾಟ್ಸ್‌ಮನ್ ಎಡಗೈ ಸ್ಪಿನ್ನರ್ ಜಾಸ್ ಜಾನ್ಸನ್‌ಗೆ ಒಪ್ಪಿಸಿದರು. ಜೊನಾಸನ್ ನಾಲ್ಕು ಓವರ್‌ಗಳಲ್ಲಿ ಕೇವಲ 12 ರನ್‌ಗಳಿಗೆ ಐದು ವಿಕೆಟ್ ಪಡೆದು ಬೀಗಿದರು.
ಆಸ್ಟ್ರೇಲಿಯಾದ ಇನ್ನಿಂಗ್ಸ್‌ನಲ್ಲಿ ಅಜೇಯ 71 ರನ್ ಗಳಿಸಿದ ಆರಂಭಿಕ ಬೆಥ್ ಮೂನಿ ಅವರು ತಂಡದ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ಆಶ್ಲೀ ಗಾರ್ಡ್ನರ್, ಹಾಗೂ ಮೆಗ್ ಲ್ಯಾನಿಂಗ್ 26 ರನ್ ಸಿಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


