ಅಂಡರ್ 19 ವಿಶ್ವಕಪ್: 'ಯಶಸ್ವಿ'ಯ ಯಶಸ್ಸಿನ ಆಟ, ಪಾಕಿಸ್ತಾನ ಮಣಿಸಿದ ಟೀಂ ಇಂಡಿಯಾ ಫೈನಲ್ ಗೆ
ಅಂಡರ್ 19 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ಸ್ ಪಂದ್ಯದಲ್ಲಿ ಭರವಸೆಯ ಆಟಗಾರ ಯಶಸ್ವಿ ಜಸ್ವಾಲ್ ಬಾರಿಸಿದ ಶತಕದ ನೆರವಿನಿಂದ ಟೀಮ್ ಇಂಡಿಯಾ 10 ವಿಕೆಟ್ ಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿ, ಮತ್ತೊಮ್ಮೆ ಫೈನಲ್ ಗೆ ಪ್ರವೇಶ ಪಡೆದಿದೆ.

ಪೊಷೆಫ್ ಸ್ಟ್ರೂಮ್:ಅಂಡರ್ 19 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ಸ್ ಪಂದ್ಯದಲ್ಲಿ ಭರವಸೆಯ ಆಟಗಾರ ಯಶಸ್ವಿ ಜಸ್ವಾಲ್ ಬಾರಿಸಿದ ಶತಕದ ನೆರವಿನಿಂದ ಟೀಮ್ ಇಂಡಿಯಾ 10 ವಿಕೆಟ್ ಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿ, ಮತ್ತೊಮ್ಮೆ ಫೈನಲ್ ಗೆ ಪ್ರವೇಶ ಪಡೆದಿದೆ.
ಪಾಕಿಸ್ತಾನ ಮೊದಲು ಬ್ಯಾಟ್ ಮಾಡಿ 172 ರನ್ ಗಳಿಗೆ ಆಲೌಟ್ ಆಯಿತು. ಗುರಿಯನ್ನು ಹಿಂಬಾಲಿಸಿದ ಟೀಮ್ ಇಂಡಿಯಾ ವಿಕೆಟ್ ನಷ್ಟವಿಲ್ಲದೆ 35.2 ಓವರ್ ಗಳಲ್ಲಿ 176 ರನ್ ಬಾರಿಸಿ ಜಯ ಸಾಧಿಸಿತು
ಭಾರತ್ದ ಪರ ಪ್ರಾರಂಭಿಕ ಆಟಗಾರರಾಗಿದ್ದ ದಿವ್ಯಾಂಶ್ ಸೆಕ್ಸೇನಾ ಹಾಗೂ ಯಶಸ್ವಿ ಅದ್ಭುತ ಬ್ಯಾಟಿಂಗ್ ನಡೆಸಿ ವಿಕೆಟ್ ನಷ್ಟವಿಲ್ಲದೆ ಜಯವನ್ನು ತಂದುಕೊಟ್ಟರು.ಯಶಸ್ವಿ 105 ರನ್ ಗಳಿಸಿ ಶತಕದ ಆಟವಾಡಿದ್ದರೆ ಸೆಕ್ಸೇನಾ ಆಕರ್ಷಕ ಅರ್ಧಶತಕ (59) ಸಿಡಿಸಿ ಗಮನ ಸೆಳೆದರು.
ಇದಕ್ಕೂ ಮೊದಲು ಭಾರತದ ಬೌಲರ್‌ಗಳು ಮೊದಲ ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು 172 ಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು. ಕಾರ್ತಿಕ್ ತ್ಯಾಗಿ (8 ಓವರ್‌ಗಳಲ್ಲಿ 2/32) ಹಾಗೂ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ (10 ಓವರ್‌ಗಳಲ್ಲಿ 2/46) ಪಾಕಿಸ್ತಾನ ಆಟಗಾರರಿಗೆ ಪೆವಿಲಿಯನ್ ಹಾದಿ ತೋರಿಸಿದ್ದರು.
ಇಷ್ಟೇ ಅಲ್ಲದೆ ಎಡಗೈ ಸ್ಪಿನ್ನರ್ ಅಥರ್ವ ಅಂಕೋಲೆಕರ್ (7 ಓವರ್‌ಗಳಲ್ಲಿ 1/29), ಎಡಗೈ ಸೀಮರ್ ಸುಶಾಂತ್ ಮಿಶ್ರಾ (8.1 ಓವರ್‌ಗಳಲ್ಲಿ 3/28) ಮತ್ತು ಅರೆಕಾಲಿಕ ಲೆಗ್ ಸ್ಪಿನ್ನರ್ ಯಶಸ್ವಿ ಜೈಸ್ವಾಲ್ (3 ಓವರ್‌ಗಳಲ್ಲಿ 1/11) ಸಹ ಪಾಕ್ ಬ್ಯಾಟ್ಸ್ ಮನ್ ಗಳಿಗೆ ಸವಾಲಾಗಿ ಪರಿಣಮಿಸಿದರು.
ಪಾಕ್ ಪರ ನಾಯಕ ರೋಹೈಲ್ ನಜೀರ್ (102 ಎಸೆತಗಳಲ್ಲಿ 62) ಮತ್ತು ಓಪನರ್ ಹೈದರ್ ಅಲಿ (77 ಎಸೆತಗಳಲ್ಲಿ 56) ಮಾತ್ರವೇಉತ್ತಮ ಪ್ರದರ್ಶನ ಣೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


