ಎಂಜಲು ನಿಷೇಧದಿಂದಾಗಿ ಬೌಲರ್ ಗಳ ಕೈ ಕಟ್ಟಿ ಹಾಕಿದಂತಾಗಿದೆ: ಸಚಿನ್ ತೆಂಡೂಲ್ಕರ್
ಕೋವಿಡ್ ಲಾಕ್ ಡೌನ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಆರಂಭವಾಗಿದೆಯಾದರೂ, ಕೋವಿಡ್ ನಿಯಮಗಳಿಂದಾಗಿ ಕ್ರಿಕೆಟಿಗರ ಕೈ ಕಟ್ಟಿಹಾಕಿದಂತಾಗಿದೆ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಮುಂಬೈ: ಕೋವಿಡ್ ಲಾಕ್ ಡೌನ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಆರಂಭವಾಗಿದೆಯಾದರೂ, ಕೋವಿಡ್ ನಿಯಮಗಳಿಂದಾಗಿ ಕ್ರಿಕೆಟಿಗರ ಕೈ ಕಟ್ಟಿಹಾಕಿದಂತಾಗಿದೆ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಕೋವಿಡ್ ನಿಯಮಗಳಿಂದಾಗಿ ಕ್ರಿಕೆಟಿಗರ ಕೈ ಕಟ್ಟಿ ಹಾಕಿದಂತಾಗಿದ್ದು, ಬಯೋ ಬಬಲ್ ನಲ್ಲಿ ಉಳಿದುಕೊಳ್ಳಲು ಕ್ರಿಕೆಟಿಗರು ಸಾಕಷ್ಟು ಹರಸಾಹಸ ಪಡಬೇಕು. ಇದು ನಿಜಕ್ಕೂ ಅವರಿಗೆ ದೊಡ್ಡ ಸವಾಲಿನ ಕೆಲಸವೇ ಸರಿ, ಇನ್ನು ಕೋವಿಡ್ ನಿಯಮಗಳೂ ಕೂಡ ಕ್ರಿಕೆಟಿಗರನ್ನು ಇನ್ನಿಲ್ಲದಂತೆ ಗೊಂದಲಕ್ಕೀಡು ಮಾಡಿದ್ದು, ಪ್ರಮುಖವಾಗಿ ಎಂಜಲು ನಿಷೇಧ ನಿಯಮ ಬೌಲರ್ ಗಳ ಕೈ ಕಟ್ಟಿ ಹಾಕಿದೆ. ಚೆಂಡಿಗೆ ಎಂಜಲು ಹಾಕುವ ಮೂಲಕ ಬೌಲರ್ ಗಳು ಚೆಂಡಿನ ಮೇಲಿನ ಹಿಡಿತವನ್ನು ಸಾಧಿಸುತ್ತಿದ್ದರು. ಆದರೆ ಇದರ ನಿಷೇದಿಂದಾಗಿ ಚೆಂಡಿನ ಮೇಲಿನ ಹಿಡಿತ ಸಾಧಿಸಲಾಗದೇ ಬೌಲರ್ ಗಳು ಪರದಾಡುತ್ತಿದ್ದಾರೆ.
ಪ್ರಮುಖವಾಗಿ ಭಾರತ ಜಸ್ ಪ್ರೀತ್ ಬುಮ್ರಾ ರಂತಹ ವೇಗದ ಬೌಲರ್ ಗಳಿಗೆ ತೀವ್ರ ಅನಾನುಕೂಲವಾಗುತ್ತಿದ್ದು, ಈ ನಿಯಮ ನಿಜಕ್ಕೂ ಬೌಲರ್ ಗಳನ್ನು ಅಂಗವಿಕಲರನ್ನಾಗಿ ಮಾಡಿದೆ. ಇದರ ಲಾಭ ಪಡೆಯುತ್ತಿರುವ ಬ್ಯಾಟ್ಸ್ ಮನ್ ಗಳು ರನ್ ಮಳೆ ಹರಿಸುತ್ತಿದ್ದಾರೆ. ವೇಗದ ಬೌಲರ್ ಗಳಿಗೆ ಸ್ವಿಂಗ್ ಪ್ರಮುಖ ಅಸ್ತ್ರವಾಗಿರುತ್ತದೆ. ಚೆಂಡಿಗೆ ಎಂಜಲು ಹಚ್ಚುವುದರಿಂದ ಚೆಂಡಿನ ಮೇಲೆ ಹಿಡಿತ ಸಾಧಿಸಿ ಸ್ವಿಂಗ್ ಮಾಡಬಹುದು. ಆದರೆ ಈಗ ಎಂಜಲು ಹಚ್ಚುವುದನ್ನೇ ನಿಷೇಧ ಮಾಡಿರುವುದರಿಂದ ಬೌಲರ್ ಗಳ ಪ್ರಮುಖ ಅಂಗವನ್ನೇ ಕಸಿದಂತಾಗಿದೆ. ಹೀಗಾಗಿ ಎಂಜಲಿಗೆ ಬದಲಾಗಿ ಬೇರೆ ವ್ಯವಸ್ಥೆ ಮಾಡಲೇ ಬೇಕಿದೆ. ಇಲ್ಲದಿದ್ದರೆ ಬೌಲರ್ ಗಳು ಬಲಿಯಾಗಲಿದ್ದಾರೆ. ಪ್ರಸ್ತುತ ನಮ್ಮಲ್ಲಿ ಎಂಜಲಿಗೆ ಯಾವುದೇ ಪರ್ಯಾಯವಿಲ್ಲ, ಕ್ರಿಕೆಟ್ ನಲ್ಲಿ ಎಂಜಲು ಹಾಗೂ ಬೆವರು ಸಾಮಾನ್ಯ. ಆದರೆ ಬೆವರನ್ನು ಎಂಜಲಿಗೆ ಪರ್ಯಾಯ ಎನ್ನಲು ಸಾಧ್ಯವಿಲ್ಲ. ಬೆವರಿಗಿಂತ ಎಂಜಲು ಮುಖ್ಯ. ಬೆವರಿನೊಂದಿಗೆ ಹೋಲಿಸಿದರೆ ಬೌಲರ್‌ಗಳು ಎಂಜಲನ್ನು ಹೆಚ್ಚು ಅವಲಂಬಿಸುತ್ತಾರೆ.
ಸಾಮಾನ್ಯವಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ಬೌಲರ್ ಗಳು ಚೆಂಡಿನ ಮೇಲಿನ ಹಿಡಿತವನ್ನು ಸಮತೋಲನಗೊಳಿಸಬೇಕಾದರೆ ಶೇ.60ರಷ್ಟು ಎಂಜಲು ಮತ್ತು 40 ರಷ್ಟು ಬೆವರಿನ ಅವಶ್ಯಕತೆ ಇರುತ್ತದೆ ಎಂದು ಸಚಿನ್ ಹೇಳಿದ್ದಾರೆ,
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


