ಆಸ್ಟ್ರೇಲಿಯಾ ‘ಎ’, ಭಾರತ ಅಭ್ಯಾಸ ಪಂದ್ಯ ಡ್ರಾ
ಆಸ್ಟ್ರೇಲಿಯಾ ಎ ಹಾಗೂ ಭಾರತ ನಡುವಿನ ಅಭ್ಯಾಸ ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ.

ಸಿಡ್ನಿ: ಆಸ್ಟ್ರೇಲಿಯಾ ಎ ಹಾಗೂ ಭಾರತ ನಡುವಿನ ಅಭ್ಯಾಸ ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ.
ಶನಿವಾರ ಎರಡನೇ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಗೆ 386 ರನ್ ಗಳಿಗೆ ದಿನದಾಟದ ಮುಗಿಸಿದ ಭಾರತ ಡಿಕ್ಲೇರ್ ಮಾಡಿಕೊಂಡಿತು. ಎರಡನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ಎ ನಾಲ್ಕು ವಿಕೆಟ್ ಗೆ 307 ರನ್ ಸೇರಿಸಿ ಮುನ್ನುಗುತ್ತಿದ್ದಾಗ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.
ಆತಿಥೇಯ ತಂಡದ ಪರ ಮೇಲ್ಪಂಕ್ತಿಯ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಬೆನ್ ಮೆಕ್ ಡರ್ಮೊಟ್ ಹಾಗೂ ಅಲೆಕ್ಸ್ ಕ್ಯಾರಿ (58) ಜೋಡಿ ನಾಲ್ಕನೇ ವಿಕೆಟ್ ಗೆ ಶತಕದ ಜೊತೆಯಾಟ ನೀಡಿ ತಂಡಕ್ಕೆ ಆಧಾರವಾಯಿತು.
ಬೆನ್ ಮೆಕ್ ಡರ್ಮೊಟ್ ಹಾಗೂ ಜ್ಯಾಕ್ ವೈಲ್ಡ್ ಮಥ್ ಜೋಡಿ ಸಹ ಐದನೇ ವಿಕೆಟ್ ಗೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಬೆನ್ 167 ಎಸೆತಗಳಲ್ಲಿ 16 ಬೌಂಡರಿ ಸೇರಿದಂತೆ 107 ರನ್ ಬಾರಿಸಿ ಅಜೇಯರಾಗುಳಿದರು. ಜ್ಯಾಕ್ ವೈಲ್ಡ್ ಮಥ್ 12 ಬೌಂಡರಿ, 3 ಸಿಕ್ಸರ್ ಸಹಾಯದಿಂದ 111 ರನ್ ಬಾರಿಸಿ ಔಟ್ ಆಗದೇ ಉಳಿದರು.
ಸಂಕ್ಷಿಪ್ತ ಸ್ಕೋರ್
ಭಾರತ: 194, ಎರಡನೇ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಗೆ 386 (ಡಿಕ್ಲೇರ್)
ಆಸ್ಟ್ರೇಲಿಯಾ ಎ: 108, ಎರಡನೇ ಇನ್ನಿಂಗ್ಸ್ 4 ವಿಕೆಟ್ ಗೆ 307
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


