ಸೆಹ್ವಾಗ್ ಮಾತು ಕೇಳಿದ್ದರೆ ಹೆಚ್ಚು ಕಾಲ ನಾನು ತಂಡದಲ್ಲಿ ಉಳಿಯುತ್ತಿದ್ದ: ಆಕಾಶ್ ಚೋಪ್ರಾ
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮಾತು ಕೇಳಿದ್ದರೆ ನಾನು ತಂಡದಲ್ಲಿ ಉಳಿಯುತ್ತಿದ್ದೆನೋ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ.

ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮಾತು ಕೇಳಿದ್ದರೆ ನಾನು ತಂಡದಲ್ಲಿ ಉಳಿಯುತ್ತಿದ್ದೆನೋ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ.
ಭಾರತ ಪರ ಕೇವಲ 10 ಟೆಸ್ಟ್ ಪಂದ್ಯಗಳನ್ನು ಮಾತ್ರ ಆಡಿರುವ ಆಕಾಶ್ ಚೋಪ್ರಾ ಅವರು ಸೆಹ್ವಾಗ್ ಜೊತೆ ಆರಂಭಿಕರಾಗಿ ಬ್ಯಾಟಿಂಗ್ ಮಾಡಿದ್ದರು. ಆದರೆ ತಂಡದಲ್ಲಿ ತಳವೂರಲು ಸಾಧ್ಯವಾಗಿರಲಿಲ್ಲ.
ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾಗ ಸೆಹ್ವಾಗ್ ಅವರು ನನಗೆ ಚೋಪ್ರಾ ಜೀ ನೀವು ಪಂದ್ಯದಲ್ಲಿ 40-40 ರನ್ ಗಳನ್ನು ಗಳಿಸುತ್ತಿದ್ದರೆ ತಂಡದಿಂದ ಕೈಬಿಡುತ್ತಾರೆ. ಹೆಚ್ಚು ರನ್ ಗಳಿಸದೆ ಹೋದರೆ ಯಾವು ಆಟಗಾರ ಸಹ ಹೆಚ್ಚು ಕಾಲ ತಂಡದಲ್ಲಿ ಉಳಿಯುವುದಿಲ್ಲ ಎಂದು ಸಲಹೆ ನೀಡಿದ್ದರು ಎಂದು ಆಕಾಶ್ ಚೋಪ್ರಾ ಸ್ಮರಿಸಿಕೊಂಡಿದ್ದಾರೆ.
ಗೌರವ್ ಕಪೂರ್ ಜತೆಗಿನ ಸಂದರ್ಶನದ ವೇಳೆ ಆಕಾಶ್ ಚೋಪ್ರಾ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸೆಹ್ವಾಗ್ ಧೈರ್ಯಶಾಲಿ ಹಾಗೂ ಆಕ್ರಮಣಶೀಲತೆಯೊಂದಿಗೆ ಬ್ಯಾಟಿಂಗ್ ಮಾಡುತ್ತಾರೆ. ಬೌನ್ಸರ್ ಗಳನ್ನು ಪ್ರತಿ ದಿಕ್ಕಿಗೂ ಬಾರಿಸುತ್ತಿದ್ದರು. ಅವರು ಏನೇ ಮಾಡಿದರೂ ಅದನ್ನು ಪ್ರಾಮಾಣಿಕತೆಯಿಂದ ಮಾಡುತ್ತಿದ್ದರು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


