ಮಹಿಳಾ ಐಪಿಎಲ್ ನಲ್ಲಿ ಆಡುವುದನ್ನು ಎದುರು ನೋಡುತ್ತಿದ್ದೇನೆ: ಸ್ಮೃತಿ ಮಂಧನ
ಮಹಿಳಾ ಐಪಿಎಲ್ ಟೂರ್ನಿ ಆಯೋಜನೆಯನ್ನು ಮಹಿಳಾ ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ ಮಂದಣ್ಣ ಸ್ವಾಗತಿಸಿದ್ದು, ಮಹಿಳಾ ಟಿ-20 ಟೂರ್ನಮೆಂಟ್ ನಲ್ಲಿ ಆಡಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.

ನವದೆಹಲಿ: ಮಹಿಳಾ ಐಪಿಎಲ್ ಟೂರ್ನಿ ಆಯೋಜನೆಯನ್ನು ಮಹಿಳಾ ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ ಮಂದಣ್ಣ ಸ್ವಾಗತಿಸಿದ್ದು, ಮಹಿಳಾ ಟಿ-20 ಟೂರ್ನಮೆಂಟ್ ನಲ್ಲಿ ಆಡಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.
ಯುಎಇನಲ್ಲಿ ಮಹಿಳಾ ಐಪಿಎಲ್ ಟೂರ್ನಿ ನಡೆಸಲಾಗುವುದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ ಬೆನ್ನಲ್ಲೇ ಸ್ಮೃತಿ ಮಂದಣ್ಣ ಈ ರೀತಿಯ ಹೇಳಿಕೆ ನೀಡಿದ್ದಾರೆ. ಸ್ವಾಗತಾರ್ಹವಾದ ಬೆಳವಣಿಗೆ, ಮಹಿಳಾ ಐಪಿಎಲ್ ನಲ್ಲಿ ಆಡುವುದಕ್ಕೆ ಎದುರು ನೋಡುತ್ತಿರುವುದಾಗಿ ಅವರು ಟ್ವೀಟ್ ಮಾಡಿದ್ದಾರೆ.
ಯುಎಇನಲ್ಲಿ ಐಪಿಎಲ್ ಫ್ಲೇ ಆಫ್ ಸಂದರ್ಭದಲ್ಲಿ ಮೂರು ತಂಡಗಳನ್ನೊಳಗೊಂಡ ಮಹಿಳಾ ಟಿ-20 ಟೂರ್ನಮೆಂಟ್ ನಡೆಸಲಾಗುವುದು ಎಂದು ಬಿಸಿಸಿಐ ಭಾನುವಾರ ಸ್ಪಷ್ಟಪಡಿಸಿತ್ತು. ಈ ನಿರ್ಧಾರವನ್ನು ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ, ಪೂನಾಮ್ ಯಾದವ್, ವೇದಕೃಷ್ಣಮೂರ್ತಿ ಸೇರಿದಂತೆ ಹಲವು ಟೀ ಇಂಡಿಯಾ ಸ್ಟಾರ್ ಗಳು ಸ್ವಾಗತಿಸಿದ್ದಾರೆ.
ಆದಾಗ್ಯೂ, ಮಹಿಳಾ ಐಪಿಎಲ್ ಬಗ್ಗೆ ಆಸ್ಟ್ರೇಲಿಯಾದ ಆಟಗಾರ್ತಿಯರಾದ ಅಲಿಸಾ ಹೀಲಿ ಮತ್ತು ರಾಚೆಲ್ ಹೇನ್ಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 17ರಿಂದ ನವೆಂಬರ್ 29ರವರೆಗೂ ನಡೆಯಲಿರುವ ಮಹಿಳಾ ಬಿಗ್ ಬಾಸ್ ಲೀಗ್ ಜೊತೆಗಿನ ವೇಳಾಪಟ್ಟಿ ಸಂಘರ್ಘ ಇದಕ್ಕೆ ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


