ವಿಂಡೀಸ್ ವಿರುದ್ಧ ಸತತ 10ನೇ ಸರಣಿ ಜಯ; ದಾಖಲೆ ಬರೆದ ಟೀಂ ಇಂಡಿಯಾ
ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲೂ ಜಯಭೇರಿ ಭಾರಿಸುವ ಮೂಲಕ ಟೀಂ ಇಂಡಿಯಾ ಏಕದಿನ ಸರಣಿಯನ್ನು ಕೈವಶ ಮಾಡಿಕೊಳ್ಳುವ ಮೂಲಕ ಅಪೂರ್ವ ದಾಖಲೆಯೊಂದನ್ನು ನಿರ್ಮಾಣ ಮಾಡಿದೆ.

ಕಟಕ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲೂ ಜಯಭೇರಿ ಭಾರಿಸುವ ಮೂಲಕ ಟೀಂ ಇಂಡಿಯಾ ಏಕದಿನ ಸರಣಿಯನ್ನು ಕೈವಶ ಮಾಡಿಕೊಳ್ಳುವ ಮೂಲಕ ಅಪೂರ್ವ ದಾಖಲೆಯೊಂದನ್ನು ನಿರ್ಮಾಣ ಮಾಡಿದೆ.
ಏಕದಿನ ಸರಣಿ ಗೆಲುವಿನ ದೃಷ್ಟಿಯಿಂದ ನಿನ್ನೆಯ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಿತ್ತು. ಆದರೂ ವಿಂಡೀಸ್ ಗಿಂತ ಈ ಪಂದ್ಯದ ಗೆಲವು ಭಾರತಕ್ಕೆ ಹೆಚ್ಚಿನ ಮಹತ್ವದ್ದಾಗಿತ್ತು. ಕಾರಣ ಈ ಪಂದ್ಯವನ್ನು ಗೆಲ್ಲುವ ಮೂಲಕ ವಿರಾಟ್ ಕೊಹ್ಲಿ ಪಡೆ ಪ್ರವಾಸಿ ಕೆರಿಬಿಯನ್ನರ ವಿರುದ್ಧ ಸತತ 10ನೇ ದ್ವಿಪಕ್ಷೀಯ ಸರಣಿ ಗೆಲುವು ಸಾಧಿಸುವ ಹಂಬಲ ಹೊಂದಿತ್ತು. ಆ ಮೂಲಕ ಮತ್ತೊಂದು ದಾಖಲೆಗೆ ಕೊಹ್ಲಿ ಪಡೆ ತುದಿಗಾಲಲ್ಲಿ ನಿಂತಿತ್ತು.
ನಿರೀಕ್ಷೆಯಂತೆಯೇ ಮೂರನೇ ಏಕದಿನ ಪಂದ್ಯವನ್ನೂ ರೋಚಕ 4 ವಿಕೆಟ್ ಗಳ ಅಂತರದಲ್ಲಿ ಜಯಿಸುವ ಮೂಲಕ ಟೀಂ ಇಂಡಿಯಾ ದಾಖಲೆ ನಿರ್ಮಾಣ ಮಾಡಿದೆ. ಈ ಗೆಲುವಿನ ಮೂಲಕ ಕೊಹ್ಲಿ ಪಡೆ ವಿಂಡೀಸ್ ವಿರುದ್ಧ ಸತತ 10ನೇ ಸರಣಿ ಜಯಿಸಿದ ದಾಖಲೆ ನಿರ್ಮಾಣ ಮಾಡಿದೆ.
2006ರಲ್ಲಿ ಕೊನೆಯದಾಗಿ ವಿಂಡೀಸ್ ನೆಲದಲ್ಲಿ ಭಾರತ ಏಕದಿನ ಸರಣಿ ಸೋತಿದೆ. ಬಳಿಕ 2007, 2011-12, 2013-14, 2014-15, 2018-19ರಲ್ಲಿ ತವರಿನಲ್ಲಿ ಮತ್ತು 2009, 2011, 2017, 2019ರಲ್ಲಿ ವಿಂಡೀಸ್ನಲ್ಲಿ ಭಾರತ ಸರಣಿ ಜಯಿಸಿದೆ. ಭಾರತ 2005ರಲ್ಲಿ ಕೊನೆಯದಾಗಿ ತವರಿನಲ್ಲಿ ಸತತ 2ನೇ ಏಕದಿನ ಸರಣಿ ಸೋತಿತ್ತು. ವಿಂಡೀಸ್ ವಿರುದ್ಧ 2002ರ ನವೆಂಬರ್ನಲ್ಲಿ 3-4ರಿಂದ ಸರಣಿ ಸೋತಿದ್ದರೆ, ಬಳಿಕ 2005ರ ಏಪ್ರಿಲ್ನಲ್ಲೇ ತವರಿನಲ್ಲಿ ದ್ವಿಪಕ್ಷೀಯ ಸರಣಿ ಆಡಿದ್ದ ಭಾರತ, 2-4ರಿಂದ ಪಾಕ್ಗೆ ಮಣಿದಿತ್ತು.
CHAMPIONS
Related Article
ಭಾರತೀಯ ಕ್ರಿಕೆಟ್ ಗೆ 2019 ಅತ್ಯುತ್ತಮ ವರ್ಷಗಳಲ್ಲಿ ಒಂದಾಗಿದೆ- ವಿರಾಟ್ ಕೊಹ್ಲಿ
ಅನ್ ಲಕ್ಕಿ ಮೈದಾನದಲ್ಲಿ ಗೆದ್ದು ಬೀಗಿದ ಕೊಹ್ಲಿ ಪಡೆ, ಸರಣಿ ಕೈ ವಶ ಮಾಡಿಕೊಂಡ ಟೀಂ ಇಂಡಿಯಾ!
ಮತ್ತೊಂದು ವಿಶ್ವ ದಾಖಲೆ ಬರೆದ 'ಹಿಟ್ ಮ್ಯಾನ್' ರೋಹಿತ್ ಶರ್ಮಾ, ಜಯಸೂರ್ಯ ದಾಖಲೆ ಧೂಳಿಪಟ!
ವಿಡಿಯೋ: ಒಂದಲ್ಲ, ಎರಡಲ್ಲಾ ಮೂರು ಸುಲಭ ಕ್ಯಾಚ್ ಬಿಟ್ಟ ರಿಷಬ್ ಪಂತ್, ನೆಟಿಗರಿಂದ ಮಂಗಳಾರತಿ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


