ಕ್ರಿಕೆಟ್

ಧೋನಿಗಿಂತ ಉತ್ತಮ ನಾಯಕ ಯಾರು? ಧವನ್ ಉತ್ತರ ಹೀಗಿದೆ

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಬಳಿಕ ಭಾರತ ತಂಡದಿಂದ ದೂರ ಉಳಿದಿರುವ ಮಹೇಂದ್ರ ಸಿಂಗ್ ಧೋನಿ ಕುರಿತು ಟೀಮ್ ಇಂಡಿಯಾ ಆರಂಭಿಕ ಬ್ಯಾಟ್ಸ್‌‌ಮನ್ ಶಿಖರ್ ಧವನ್ ಕುತೂಹಲಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ.

ಧೋನಿಗಿಂತ ಉತ್ತಮ ನಾಯಕ ಯಾರು? ಧವನ್ ಉತ್ತರ ಹೀಗಿದೆ
Dhavan says Dhoni is the best captain ever India has seen
Published On :

ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಬಳಿಕ ಭಾರತ ತಂಡದಿಂದ ದೂರ ಉಳಿದಿರುವ ಮಹೇಂದ್ರ ಸಿಂಗ್ ಧೋನಿ ಕುರಿತು ಟೀಮ್ ಇಂಡಿಯಾ ಆರಂಭಿಕ ಬ್ಯಾಟ್ಸ್‌‌ಮನ್ ಶಿಖರ್ ಧವನ್ ಕುತೂಹಲಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ. ವೆಸ್‌ಟ್‌ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗಳ ಭಾರತ ತಂಡದಲ್ಲಿ ಎಂ.ಎಸ್ ಧೋನಿ ಕಾಣಿಸಿಕೊಂಡಿರಲ್ಲಿ. 

ಹಾಗಾಗಿ, ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಹಾಗಾಗಿ ಧೋನಿ ಭವಿಷ್ಯ ಏನಾಗಲಿದೆ ಎಂಬುದು ಕುತೂಹಲವೆನಿಸಿದೆ. ಈ ಬಗ್ಗೆೆ ಪ್ರತಿಕ್ರಿಯೆ ನೀಡಿರುವ ಧವನ್, ಯಾವಾಗ ನಿವೃತ್ತಿ ಮಾಡಬೇಕೆಂಬುದು ಧೋನಿಗೆ ತಿಳಿದಿದೆ. ಅದು ಅವರ ನಿರ್ಧಾರವೇ ಆಗಲಿ ಎಂದು ಬಯಸಿದ್ದಾರೆ.

ಸುದೀರ್ಘ ಸಮಯದಿಂದ ಧೋನಿ ಆಡುತ್ತಿದ್ದಾರೆ. ಯಾವಾಗ ನಿವೃತ್ತಿ ಮಾಡಬೇಕೆಂಬುದು ತಿಳಿದಿದೆ. ಅದು ಧೋನಿ ನಿರ್ಧಾರವೇ ಆಗಬೇಕು. ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಭಾರತಕ್ಕಾಗಿ ಅನೇಕ ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ. ಹಾಗೆಯೇ ಸಮಯ ಬಂದಾಗ ಈ ವಿಷಯದಲ್ಲೂ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಭರವಸೆ ನನಗಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.