ಬಿಳಿ ಜೆರ್ಸಿ ತೊಡುವ ಆಸೆ ಕೈಗೂಡಿದೆ: ಜಸ್ ಪ್ರೀತ್ ಬುಮ್ರಾ
ಬಿಳಿ ಜೆರ್ಸಿ ತೊಡುವ ತಮ್ಮ ಬಹುದಿನಗಳ ಕನಸು ನನಸಾಗಿದೆ ಎಂದು ಭಾರತದ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬುಮ್ರಾ ತಿಳಿಸಿದ್ದಾರೆ.

ಮುಂಬೈ: ಬಿಳಿ ಜೆರ್ಸಿ ತೊಡುವ ತಮ್ಮ ಬಹುದಿನಗಳ ಕನಸು ನನಸಾಗಿದೆ ಎಂದು ಭಾರತದ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬುಮ್ರಾ ತಿಳಿಸಿದ್ದಾರೆ.
ಅಭಿಮಾನಿಗಳ ಬೆಂಬಲ ಹಾಗೂ ಸತತ ಪ್ರಯತ್ನದ ಫಲದಿಂದ ಕ್ರಿಕೆಟ್ ನ ಮೂರು ಮಾದರಿಯಲ್ಲಿ ಆಡುತ್ತಿರುವುದಾಗಿ ಬುಮ್ರಾ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.
ಕ್ರಿಕೆಟ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬುಮ್ರಾ, ಹಂತ ಹಂತವಾಗಿ ಆಟದಲ್ಲಿ ಪಕ್ವತೆ ಸಿಗುತ್ತಿದೆ ಎಂದಿದ್ದಾರೆ. ಮೈದಾನದಲ್ಲಿ ತಾವು ಶಾಂತರಾಗಿ ಕಾಣುತ್ತೀರಾ ಎಂದು ಕೇಳಿದ ಪ್ರಶ್ನೆಗೆ, ಕೆಲವೊಮ್ಮೆ ಮೈದಾನದಲ್ಲಿ ಸಿಟ್ಟು ಬರುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ. ವಿಶ್ವಕಪ್ ನಲ್ಲಿ ಆಡುವುದು ಹೆಮ್ಮೆಯ ಸಂಗತಿ. ಈ ಪಂದ್ಯಗಳಲ್ಲಿ ಒತ್ತಡ ಹೆಚ್ಚಿರುತ್ತದೆ. ಆದರೆ, ಆತ್ಮಸ್ಥೈರ್ಯ ಮಹತ್ವದಾಗಿರುತ್ತದೆ ಎಂದಿದ್ದಾರೆ.
ಇದೇ ವೇಳೆ ತಮ್ಮ ವೃತ್ತಿ ಜೀವನದ ಮರೆಯಲಾರದ ಕ್ಷಣದ ಕುರಿತು ಮಾತನಾಡಿದ ಬುಮ್ರಾ 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲ ಬಾರಿಗೆ ಐದು ವಿಕೆಟ್ ಪಡೆದಿದ್ದೆ. ಇದು ನನ್ನ ವೃತ್ತಿ ಜೀವನದ ಮರೆಯಲಾರದ ಕ್ಷಣವಾಗಿದೆ ಎಂದು ಹೇಳಿದರು.
ಟೆಸ್ಟ್ ಕ್ರಿಕೆಟ್ ಪದಾರ್ಪಣೆ ಮಾಡಿದ ಕೇವಲ 12 ಪಂದ್ಯಗಳಲ್ಲಿ ಬುಮ್ರಾ 62 ವಿಕೆಟ್ ಗಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


