ಅಂಡರ್ 19 ಏಷ್ಯಾ ಕಪ್ : ಪಾಕಿಸ್ತಾನ ಬಗ್ಗುಬಡಿದ ಭಾರತ
ಶ್ರೀಲಂಕಾದ ಮೊರಾಟುವಾದಲ್ಲಿ ನಡೆದ 19 ವರ್ಷದೊಳಗಿನವರ ಏಷ್ಯಾ ಕಪ್ ನಲ್ಲಿ ಆರಂಭಿಕ ಆಟಗಾರ ಅರ್ಜುನ್ ಅಜಾದ್ ಹಾಗೂ ಎನ್ ಟಿ ತಿಲಕ್ ವರ್ಮಾ ಅವರ ಶತಕದ ನೆರವಿನಿಂದ ಟೀಂ ಇಂಡಿಯಾ 60 ರನ್ ಗಳಿಂದ ಪಾಕಿಸ್ತಾನವನ್ನು ಬಗ್ಗುಬಡಿದೆ.

ಮೊರಾಟುವಾ: ಶ್ರೀಲಂಕಾದ ಮೊರಾಟುವಾದಲ್ಲಿ ನಡೆದ 19 ವರ್ಷದೊಳಗಿನವರ ಏಷ್ಯಾ ಕಪ್ ನಲ್ಲಿ ಆರಂಭಿಕ ಆಟಗಾರ ಅರ್ಜುನ್ ಅಜಾದ್ ಹಾಗೂ ಎನ್ ಟಿ ತಿಲಕ್ ವರ್ಮಾ ಅವರ ಶತಕದ ನೆರವಿನಿಂದ ಟೀಂ ಇಂಡಿಯಾ 60 ರನ್ ಗಳಿಂದ ಪಾಕಿಸ್ತಾನವನ್ನು ಬಗ್ಗುಬಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 305 ರನ್ ಗಳ ಸವಾಲಿನ ಮೊತ್ತ ಗಳಿಸಿತು. ಅರ್ಜುನ್ ಅಜಾದ್ 121 ಹಾಗೂ ತಿಲಕ್ 110 ರನ್ ಗಳನ್ನು ಕಲೆ ಹಾಕಿದರು. ಇವರಿಬ್ಬರ ಎರಡನೇ ವಿಕೆಟ್ ಜೊತೆಯಾದಲ್ಲಿ 183 ರನ್ ಹರಿದುಬಂದಿತು.
ಟೀಂ ಇಂಡಿಯಾ ನೀಡಿದ ಸವಾಲಿನ ಗುರಿ ಬೆನ್ನತ್ತಿದ್ದ ಪಾಕಿಸ್ತಾನ 46.4 ಓವರ್ ಗಳಲ್ಲಿ 245 ರನ್ ಗಳಿಸಲಷ್ಟೇ ಶಕ್ತವಾಯಿತು. ಪಾಕಿಸ್ತಾನ ನಾಯಕ ರೊಹಾಲಿ ಖಾನ್ 108 ಎಸೆತಗಳಲ್ಲಿ 117 ರನ್ ಗಳಿಸಿದರೆ ಹ್ಯಾರೀಸ್ ಖಾನ್ 43 ರನ್ ಗಳಿಸಿದರು. 41ನೇ ಓವರ್ ನಲ್ಲಿ ರೊಹಾಲಿಯನ್ನು ಅಕಾಶ್ ಸಿಂಗ್ ಎಲ್ ಬಿಡಬ್ಲ್ಯೂ ಬಲೆಗೆ ಕೆಡವಿದರು. ಇದರೊಂದಿಗೆ ಪಾಕಿಸ್ತಾನದ ಹೋರಾಟ ಅಂತ್ಯಗೊಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


