ಡಾನ್ ಬ್ರಾಡ್ಮನ್ ರ 71 ವರ್ಷಗಳ ಹಳೆಯ ದಾಖಲೆ ಕೊನೆಗೂ ನುಚ್ಚು ನೂರು ಮಾಡಿದ 'ಹಿಟ್ ಮ್ಯಾನ್' ರೋಹಿತ್
ಡಾನ್ ಬ್ರಾಡ್ಮನ್ ರ 71 ವರ್ಷಗಳ ಹಳೆಯ ಮತ್ತು ಅಪರೂಪದ ದಾಖಲೆಯೊಂದನ್ನು ಭಾರತ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ನುಚ್ಚುನೂರು ಮಾಡಿದ್ದಾರೆ.

ರಾಂಚಿ: ಡಾನ್ ಬ್ರಾಡ್ಮನ್ ರ 71 ವರ್ಷಗಳ ಹಳೆಯ ಮತ್ತು ಅಪರೂಪದ ದಾಖಲೆಯೊಂದನ್ನು ಭಾರತ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ನುಚ್ಚುನೂರು ಮಾಡಿದ್ದಾರೆ.
ಹೌದು.. ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿರುವ ರೋಹಿತ್ ಶರ್ಮಾ, ಡಾನ್ ಬ್ರಾಡ್ಮನ್ ರ ಅಪರೂಪದ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಹಾಲಿ ಟೆಸ್ಟ್ ಸರಣಿಯಲ್ಲಿ 2 ಶತಕ ಹಾಗೂ ಒಂದು ದ್ವಿಶತಕ ಭಾರಿಸಿರುವ ರೋಹಿತ್ ಶರ್ಮಾ ಡಾನ್ ಬ್ರಾಡ್ಮನ್ ರ ಅತ್ಯಂತ ಗರಿಷ್ಠ ಬ್ಯಾಟಿಂಗ್ ಸರಾಸರಿ ದಾಖಲೆಯನ್ನು ನುಚ್ಚುನೂರು ಮಾಡಿದ್ದಾರೆ.
ತವರಿನಲ್ಲಿ ನಡೆದ ಸರಣಿಯಲ್ಲಿ 10ಕ್ಕೂ ಹೆಚ್ಚು ಪಂದ್ಯಗಳಲ್ಲಿ ರೋಹಿತ್ ಶರ್ಮಾ ಗರಿಷ್ಠ ಬ್ಯಾಟಿಂಗ್ ಸರಾಸರಿ ಕೂಡ ಹೊಂದಿದ್ದಾರೆ. ಹಾಲಿ ಟೂರ್ನಿಯಲ್ಲಿ ರೋಹಿತ್ ಶರ್ಮಾ 99.84 ಬ್ಯಾಟಿಂಗ್ ಸರಾಸರಿ ಹೊಂದುವ ಮೂಲಕ ಈ ದಾಖಲೆಯನ್ನು ನಿರ್ಮಾಣ ಮಾಡಿದ್ದಾರೆ. ತವರಿನಲ್ಲಿ ನಡೆದ ಕಳೆದ 18 ಇನ್ನಿಂಗ್ಸ್ ಗಳಲ್ಲಿ ರೋಹಿತ್ ಶರ್ಮಾ 1,298 ರನ್ ಗಳಿಸಿದ್ದು, ಈ ಪೈಕಿ ಆರು ಶತಕ, ಐದು ಅರ್ಧಶತಕ ಕೂಡ ಸೇರಿವೆ.
ಇದೇ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಪಂದ್ಯದಲ್ಲಿ ರೋಹಿತ್ ಶರ್ಮಾ ದ್ವಿಶತಕ ಸಿಡಿಸುವ ಮೂಲಕ ದ್ವಿಶತಕ ಸಿಡಿಸಿದ ನಾಲ್ಕನೇ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದರು. ಈ ಪಟ್ಟಿಯಲ್ಲಿ ಕ್ರಿಕೆಟ್ ದಂತಕಥೆಗಳಾದ ಸಚಿನ್, ಸೆಹ್ವಾಗ್ ಮತ್ತು ಕ್ರಿಸ್ ಗೇಯ್ಲ್ ಇದ್ದಾರೆ.
Related Article
ಫಾಲೋ ಆನ್ ಹೇರಿಕೆಯಲ್ಲೂ ಕ್ಯಾಪ್ಟನ್ ಕೊಹ್ಲಿ ದಾಖಲೆ!
3ನೇ ಟೆಸ್ಟ್, ಮೊದಲ ಇನ್ನಿಂಗ್ಸ್: 162 ರನ್ ಗಳಿಗೆ ದ.ಆಫ್ರಿಕಾ ಆಲೌಟ್, ಫಾಲೋ ಆನ್ ಹೇರಿದ ಭಾರತ
3ನೇ ಟೆಸ್ಟ್: ಭಾರತೀಯ ಬೌಲರ್ ಗಳ ದಾಳಿಗೆ ತತ್ತರಿಸಿದ ದ.ಆಫ್ರಿಕಾ, ಸಂಕಷ್ಟದಲ್ಲಿ ಡುಪ್ಲೆಸಿಸ್ ಬಳಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


