ವಿವಾದಾತ್ಮಕ 'ಬೌಂಡರಿ ಕೌಂಟ್' ನಿಯಮ ಕೊನೆಗೂ ರದ್ದು!
ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನಾಟಕೀಯ ಜೊತೆಗೆ ಸಾಕಷ್ಟು ವಿವಾದಕ್ಕೂ ಕಾರಣವಾಗಿದ್ದ ಬೌಂಡರಿ ಕೌಂಟ್ ನಿಯಮ ಕೊನೆಗೂ ರದ್ದಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಮಂಡಳಿ ಸಭೆಯಲ್ಲಿ ಈ ನಿಯಮವನ್ನು ರದ್ದುಪಡಿಸಲಾಗಿದೆ.

ದುಬೈ: ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನಾಟಕೀಯ ಜೊತೆಗೆ ಸಾಕಷ್ಟು ವಿವಾದಕ್ಕೂ ಕಾರಣವಾಗಿದ್ದ ಬೌಂಡರಿ ಕೌಂಟ್ ನಿಯಮ ಕೊನೆಗೂ ರದ್ದಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಮಂಡಳಿ ಸಭೆಯಲ್ಲಿ ಈ ನಿಯಮವನ್ನು ರದ್ದುಪಡಿಸಲಾಗಿದೆ.
2019ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಸೂಪರ್ ಓವರ್ ಹಂತ ಟೈ ಆದಾಗ, ಬೌಂಡರಿ ನಿಯಮಗಳ ಆಧಾರದ ಮೇಲೆ ಇಂಗ್ಲೆಂಡ್ ತಂಡ ಚಾಂಪಿಯನ್ ಪಟ್ಟಕ್ಕೇರಿತ್ತು. ಆದರೆ, ನ್ಯೂಜಿಲೆಂಡ್ ತಂಡದ ಪರ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿತ್ತು. ಬೌಂಡರಿ ಕೌಂಟ್ ನಿಯಮದ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗಿತ್ತು.
ಐಸಿಸಿಯ ಮುಂದಿನ ಟೂರ್ನಿಗಳಲ್ಲಿ ಬೌಂಡರಿ ಕೌಂಟ್ ನಿಯಮ ಬಳಕೆ ಮಾಡುವುದಿಲ್ಲ, ಗ್ರೂಪ್ ಹಂತದಲ್ಲಿ ಸೂಪರ್ ಓವರ್ ಕೂಡಾ ಟೈ ಆದರೆ ಪಂದ್ಯವನ್ನು ಟೈ ಎಂದೇ ನಿರ್ಧರಿಸಲಾಗುತ್ತದೆ. ಆದರೆ, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಲ್ಲಿ ನಡೆಸಲಾಗುವ ಸೂಪರ್ ಓವರ್ ನಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಒಂದು ತಂಡ ಒಟ್ಟು ರನ್ ಗಳಿಕೆಯಲ್ಲಿ ಮೇಲುಗೈ ಸಾಧಿಸುವವರೆಗೂ ಸೂಪರ್ ಓವರ್ ಮುಂದುವರೆಸಲಾಗುವುದು ಎಂದು ಐಸಿಸಿ ಪ್ರಕಟಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


