ಆಲ್ ರೌಂಡರ್ ಮಿಚೆಲ್ ಸ್ಯಾಂಟ್ನರ್ ಸ್ಟನಿಂಗ್ ಕ್ಯಾಚ್ : ವಿಡಿಯೋ ವೈರಲ್ !
ಬೇ ಓವಲ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಮಿಚೆಲ್ ಸ್ಯಾಂಟ್ನರ್ ಅವರ ಸ್ಟನಿಂಗ್ ಕ್ಯಾಚಿಂಗ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೌಂಟ್ ಮೌಂಗನುಯಿ: ಬೇ ಓವಲ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಮಿಚೆಲ್ ಸ್ಯಾಂಟ್ನರ್ ಅವರ ಸ್ಟನಿಂಗ್ ಕ್ಯಾಚಿಂಗ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಐದನೇ ದಿನಾದಾಟವಾದ ಇಂದು ಎರಡನೇ ಇನ್ನಿಂಗ್ಸ್ ನಲ್ಲಿ ಎಡಗೈ ವೇಗಿ ನೀಲ್ ವ್ಯಾಗ್ನರ್ ಅವರ ಬೌಲಿಂಗ್ ನಲ್ಲಿ ಆಲ್ ರೌಂಡರ್ ಮಿಚೆಲ್ ಸ್ಯಾಂಟ್ನರ್ ಸ್ಟನಿಂಗ್ ಕ್ಯಾಚ್ ಮೂಲಕ ಓಲೈ ಪೊಪ್ ಅವರನ್ನು ಫೆವಿಲಿಯನ್ ಹಾದಿ ತೋರಿಸಿದರು.
ಬ್ಯಾಟಿನ ಅಂಚಿಗೆ ತಾಗಿದ ಬಾಲ್ ಮಿಚೆಲ್ ಸ್ಯಾಂಟ್ನರ್ ನಿಂತ ಕಡೆಗೆ ಹಾರಿತು. ಆದೇ ಸಂದರ್ಭದಲ್ಲಿ ಚಂಗನೆ ಮೇಲೆ ಹಾರಿದ ಸ್ಯಾಂಟ್ನರ್ ಚೆಂಡನ್ನು ಕ್ಯಾಚ್ ಹಿಡಿದು ಕುಣಿದು ಕುಪ್ಪಳಿಸಿದರು. ನಂತರ ಸಹ ಆಟಗಾರರು ಮಿಚೆಲ್ ಅವರನ್ನು ಅಭಿನಂದಿಸಿದರು.
ಮೊದಲ ಇನ್ನಿಂಗ್ಸ್ ನಲ್ಲಿ 353 ರನ್ ಗಳಿಗೆ ಆಲ್ ಔಟ್ ಆಗಿದ್ದ ಇಂಗ್ಲೆಂಡ್ ತಂಡ ಎರಡನೇ ಇನ್ನಿಂಗ್ಸ್ ನಲ್ಲಿ 197 ರನ್ ಗಳಿಗೆ ಆಲ್ ಔಟ್ ಆಯಿತು. ಇದರೊಂದಿಗೆ ನ್ಯೂಜಿಲೆಂಡ್ ತಂಡ ಇನ್ನಿಂಗ್ಸ್ ಹಾಗೂ 65 ರನ್ ಗಳ ಗೆಲುವು ಸಾಧಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


