ಕ್ರಿಕೆಟ್

2020 ಐಪಿಎಲ್ : ಆರ್ ಸಿಬಿ ತಂಡದಲ್ಲಿ ಭರ್ಜರಿ ಸರ್ಜರಿ

2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಬಲಿಷ್ಠ ತಂಡ ರಚಿಸುವತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಿತ್ತ ಹರಿಸಿದೆ.

2020 ಐಪಿಎಲ್ : ಆರ್ ಸಿಬಿ ತಂಡದಲ್ಲಿ ಭರ್ಜರಿ ಸರ್ಜರಿ
ಆರ್ ಸಿಬಿ ತಂಡ
Published On :

ಬೆಂಗಳೂರು: 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಬಲಿಷ್ಠ ತಂಡ ರಚಿಸುವತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಿತ್ತ ಹರಿಸಿದೆ.  

ಈ ನಿಟ್ಟಿನಲ್ಲಿ ನೂತನ ಕೋಚ್ ಸೈಮನ್ ಕ್ಯಾಟಿಟ್ ಮತ್ತು ನೂತನ ತಂಡದ ನಿರ್ದೇಶಕ ಮೈಕ್ ಹೇಸನ್ ಒಗ್ಗೂಡಿ ತಂಡದಲ್ಲಿ ಭರ್ಜರಿ ಸರ್ಜರಿ ಮಾಡಿದ್ದಾರೆ.ಕೋಲ್ಕತಾದಲ್ಲಿ ಡಿ. 19ರಂದು 2020ರ ಟೂರ್ನಿ ಸಲುವಾಗಿ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. 

ಈ ನಿಟ್ಟಿನಲ್ಲಿ ಎಲ್ಲ 8 ಫ್ರಾಂಚೈಸಿಗಳು ಶುಕ್ರವಾರ ತಾವು ಉಳಿಸಿಕೊಂಡ ಆಟಗಾರರು ಮತ್ತು ತಂಡದಿಂದ ಕೈಬಿಟ್ಟ ಆಟಗಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಿವೆ. ಎಲ್ಲ ತಂಡಗಳು ಒಟ್ಟು 127 ಆಟಗಾರರನ್ನು ಉಳಿಸಿಕೊಂಡಿವೆ. ಇದರಲ್ಲಿ 35 ಮಂದಿ ವಿದೇಶಿ ಆಟಗಾರರು ಎಂಬುದು ವಿಶೇಷ.

ಆರ್‌ಸಿಬಿ ಕೂಡ ತನ್ನ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕೆಲ ದೈತ್ಯ ಸ್ಟಾರ್ ಆಟಗಾರರನ್ನು ಹರಾಜಿಗೆ ಬಿಟ್ಟುಕೊಟ್ಟಿದೆ. ಆದರೂ ಇದರಲ್ಲಿ ಕೆಲ ಆಟಗಾರರನ್ನು ಹರಾಜಿನಲ್ಲಿ ಮರಳಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಅವಕಾಶವೂ ತಂಡಕ್ಕೆ ಇದೆ.  ರೈಟ್ ಟು ಮ್ಯಾಚ್ ಮೂಲಕ ಇತರ ತಂಡಗಳು ಅಂತಿಮ ಗೊಳಿಸಿದ್ದ ಡೀಲ್ ಕೂಡ ಕಸಿಯುವ ಅವಕಾಶವಿದೆ.

ನಾಯಕ ವಿರಾಟ್ ಕೊಹ್ಲಿ, ಮೊಯೀನ್ ಅಲಿ, ಯಜುವೇಂದ್ರ ಚಾಹಲ್, ಫೃಥ್ವಿ ಪಾಟೀಲ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪವನ್ ನೇಗಿ, ದೇವ್ ದತ್ ಪಡಿಕ್ಕಲ್, ಗುರುಕೀರಾತ್ ಸಿಂಗ್ ಮಾನ್, ವಾಷಿಂಗ್ಟನ್ ಸುಂದರ್, ಶಿವಂ ದುಬೆ, ನವದೀಪ್ ಸೈನಿ, ಎಬಿ ಡಿವಿಲಿಯರ್ಸ್ ಅವರನ್ನು ಆರ್ ಸಿಬಿ ತನ್ನಲ್ಲಿಯೇ ಉಳಿಸಿಕೊಂಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.