ಇಂದೋರ್ ಟೆಸ್ಟ್: 4000 ರನ್ ಗುರಿ ತಲುಪಿದ ಅಜಿಂಕ್ಯ ರಹಾನೆ, ಭೋಜನ ವಿರಾಮಕ್ಕೆ ಟೀಂ ಇಂಡಿಯಾ 188/3
ಇಂದೋರ್ ನಲ್ಲಿ ನಡೆಯುತ್ತಿರುವ ಭಾರತ-ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಎರಡನೇ ದಿನದಾಟದಲ್ಲಿ ಪ್ರಾರಂಭದಲ್ಲೇ ನಾಯಕ ವಿರಾಟ್ ಕೊಲ್ಹ್ಲಿ ಔಟ್ ಆಗಿದ್ದರೂ ಭೋಜನ ವಿರಾಮದ ವೇಳೆಗೆ ಭಾರತ 188/3 ರನ್ ಕಲೆಹಾಕಿದೆ. ಪ್ರಾರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ತಮ್ಮ ವೃತ್ತಿಜೀವನದ ಮೂರನೇ ಟೆಸ್ಟ್ ಶತಕದ ಸನಿಹದಲ್ಲಿದ್ದಾರೆ..

ಇಂದೋರ್: ಇಂದೋರ್ ನಲ್ಲಿ ನಡೆಯುತ್ತಿರುವ ಭಾರತ-ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಎರಡನೇ ದಿನದಾಟದಲ್ಲಿ ಪ್ರಾರಂಭದಲ್ಲೇ ನಾಯಕ ವಿರಾಟ್ ಕೊಲ್ಹ್ಲಿ ಔಟ್ ಆಗಿದ್ದರೂ ಭೋಜನ ವಿರಾಮದ ವೇಳೆಗೆ ಭಾರತ 188/3 ರನ್ ಕಲೆಹಾಕಿದೆ. ಪ್ರಾರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ತಮ್ಮ ವೃತ್ತಿಜೀವನದ ಮೂರನೇ ಟೆಸ್ಟ್ ಶತಕದ ಸನಿಹದಲ್ಲಿದ್ದಾರೆ..
ಮೊದಲ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶವನ್ನು 150 ರನ್‌ಗಳಿಗೆ ಕಟ್ಟಿ ಹಾಕಿದ್ದ ಟೀಂ ಇಂಡಿಯಾ ಸಧ್ಯ ಈಗ 38 ರನ್‌ಗಳ ಮುನ್ನಡೆ ಹೊಂದಿದೆ
ಭೋಜನ ವಿರಾಮಕ್ಕೆ ಮುನ್ನ ಮಯಾಂಕ್ 91 ರನ್ ೯13 ಬೌಂಡರಿ ಮತ್ತು ಒಂದು ಸಿಕ್ಸರ) ಗಳಿಸಿದ್ದರೆ ಅವರ ಸಹವರ್ತಿ ಚೇತೇಶ್ವರ ಪೂಜಾರ (54) ಸಹ ಅರ್ಧ ಶತಕ ಗಳಿಸಿದ್ದರು. ಇನ್ನು ಉಪ ನಾಯಕ ಅಜಿಂಕ್ಯ ರಹಾನೆ (35*) ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
ಆದರೆ, ನಾಯಕ ಕೊಹ್ಲಿ ಬ್ಯಾಟಿಂಗ್ ವೀಕ್ಷಣೆಗಾಗಿ ಬಂದಿದ್ದ ಬಹುತೇಕರಿಗೆ ಶುಕ್ರವಾರ ಮುಂಜಾನೆ ನಿರಾಶೆಯಾಗಿದೆ. ಅವರು ಬಾಂಗ್ಲಾದೇಶದ ಅತ್ಯುತ್ತಮ ಬೌಲರ್, ಸೀಮರ್ ಅಬು ಜಯೀದ್ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದ್ದರು.
4000 ರನ್ ಗುರಿ ಮುಟ್ಟಿದ ಅಜಿಂಕ್ಯ ರಹಾನೆ .
ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಟೆಸ್ಟ್ ಕ್ರಿಕೆಟ್‌ನಲ್ಲಿ 4000 ರನ್‌ಗಳ ಗುರಿ ಮುಟ್ಟಿವ ಮೂಲಕ ಹೊಸದೊಂದು ದಾಖಲೆ ನಿರ್ಮಿಸಿದ್ದಾರೆ.
ಇಂದೋರ್ ಟೆಸ್ಟ್ ನ ಎರಡನೇ ದಿನದಾತದಲ್ಲಿ ರಹಾನೆ ಈ ಸಾಧನೆ ಮಾಡಿದ್ದು ಇಂತಹಾ ದಾಖಲೆ ಬರೆದ್ ಭಾರತದ 16ನೇ ಬ್ಯಾಟ್ಸ್‌ಮನ್ ಇವರಾಗಿದ್ದಾರೆ. ಇದರೊಡನೆ ಟೀಂ ಇಂಡಿಯಾ ಮಾಜಿ ಆಟಗಾರರಾದ ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಣಣ್ ದಾಖಲೆ ಸರಿಗಟ್ಟಿದ್ದಾರೆ.
4000 Test runs for Ajinkya Rahane!
India's No.5 reaches the landmark in his 62nd appearance, on day two of the first #INDvBAN Test in Indore
Follow the action live
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


