ಕ್ರಿಕೆಟ್

ಎರಡನೇ ಟಿ-20 ಪಂದ್ಯ: ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಗೆ 21 ರನ್ ಜಯ

ಸಂಘಟಿತ ಹೋರಾಟ ನಡೆಸಿದ ನ್ಯೂಜಿಲೆಂಡ್ ತಂಡ ಎರಡನೇ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 21 ರನ್ ಗಳಿಂದ ಜಯ ಸಾಧಿಸಿತು.

ಎರಡನೇ ಟಿ-20 ಪಂದ್ಯ: ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಗೆ 21 ರನ್ ಜಯ
ಎರಡನೇ ಟಿ-20 ಪಂದ್ಯ: ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಗೆ 21 ರನ್ ಜಯ
Published On :

ವೆಲ್ಲಿಂಗ್ಟನ್: ಸಂಘಟಿತ ಹೋರಾಟ ನಡೆಸಿದ ನ್ಯೂಜಿಲೆಂಡ್ ತಂಡ ಎರಡನೇ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 21 ರನ್ ಗಳಿಂದ ಜಯ ಸಾಧಿಸಿತು. 

ಈ ಮೂಲಕ ಐದು ಪಂದ್ಯಗಳ ಟಿ-20 ಸರಣಿಯಲ್ಲಿ 1-1 ಸಮಬಲ ಮಾಡಿಕೊಂಡಿದೆ. ಇಲ್ಲಿನ, ವೆಸ್ಟ್ ಪ್ಯಾಕ್  ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್ ಗಳಿಗೆ ಎಂಟು ವಿಕೆಟ್ ಕಳೆದುಕೊಂಡು 176 ರನ್ ದಾಖಲಿಸಿತು. ಬಳಿಕ, 177 ರನ್ ಗುರಿ ಹಿಂಬಾಲಿಸಿದ ಇಂಗ್ಲೆಂಡ್ 19.5 ಓವರ್ ಗಳಲ್ಲಿ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡು 155 ರನ್ ಗಳಿಗೆ ಸೀಮಿತವಾಯಿತು. 

ಮೊದಲನೇ ಪಂದ್ಯದಲ್ಲಿ ಮಾಡಿದ ತಪ್ಪನ್ನು ಸರಿಪಡಿಸಿಕೊಂಡು ಆಡಿದ ನ್ಯೂಜಿಲೆಂಡ್ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ನಲ್ಲಿ ಸಮಯೋಜಿತ ಪ್ರದರ್ಶನ  ತೋರುವಲ್ಲಿ ಯಶಸ್ವಿಯಾಯಿತು. ಇದರ ಫಲವಾಗಿ 21 ರನ್ ಗಳಿಂದ ಜಯ ಸಾಧಿಸಿತು. ನ್ಯೂಜಿಲೆಂಡ್ ಮೊದಲನೇ ವಿಕೆಟ್ ಬೇಗ ಕಳೆದುಕೊಂಡು ಆಂಭಿಕ ಬ್ಯಾಟ್ಸ್ ಮನ್ ಮಾರ್ಟಿನ್  ಗುಪ್ಟಿಲ್ 28 ಎಸೆತಗಳಿಗೆ 41 ರನ್ ಗಳಿಸಿದ್ದರು. ಇವರ ಜೇಮ್ಸ್ ನಿಶ್ಯಾಮ್ಸ್ 42 ರನ್, ಕಾಲಿನ್ ಡಿ ಗಗ್ರಾಂಡ್  ಹೋಮ್ ಹಾಗೂ ರಾಸ್ ಟೇಲರ್ ತಲಾ 28 ರನ್ ನೆರವಿನಿಂದ ಇಂಗ್ಲೆಂಡ್‌ಗೆ ಸ್ರ‍್ಧಾತ್ಮಕ ಗುರಿ ನೀಡುವಲ್ಲಿ ಸಾಧ್ಯವಾಯಿತು. ಇಂಗ್ಲೆಂಡ್ ಪರ ಕ್ರಿಸ್ ಜೋರ್ಡನ್  ಮೂರು ಹಾಗೂ ಸ್ಯಾಮ್ ಕರ‍್ರನ್ ಎರಡು ವಿಕೆಟ್ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.