ಮೊದಲ ಓವರ್ನಲ್ಲೇ ಬೈರ್ ಸ್ಟೋವ್ರನ್ನು 'ಗೋಲ್ಡನ್ ಡಕೌಟ್' ಮಾಡಿ ಮೈದಾನದಲ್ಲೆಲ್ಲಾ ಓಡಾಡಿದ ತಾಹೀರ್, ವಿಡಿಯೋ!
ವಿಶ್ವಕಪ್ನ ಇತಿಹಾಸದಲ್ಲೇ ಮೊದಲ ಓವರ್ ಮಾಡಿದ್ದು ಅಲ್ಲದೆ ಎರಡನೇ ಎಸೆತದಲ್ಲೇ ಜಾನಿ ಬೈರ್ಸ್ಟೋವ್ರನ್ನು 'ಗೋಲ್ಡನ್ ಡಕೌಟ್' ಮಾಡಿರುವ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಇಮ್ರಾನ್ ತಾಹಿರ್...

Published On :
ಲಂಡನ್: ವಿಶ್ವಕಪ್ನ ಇತಿಹಾಸದಲ್ಲೇ ಮೊದಲ ಓವರ್ ಮಾಡಿದ್ದು ಅಲ್ಲದೆ ಎರಡನೇ ಎಸೆತದಲ್ಲೇ ಜಾನಿ ಬೈರ್ಸ್ಟೋವ್ರನ್ನು 'ಗೋಲ್ಡನ್ ಡಕೌಟ್' ಮಾಡಿರುವ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಇಮ್ರಾನ್ ತಾಹಿರ್ ಮೈದಾನದಲ್ಲೆಲ್ಲಾ ಓಡಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಇಂಗ್ಲೆಂಡ್ ನಲ್ಲಿ ವಿಶ್ವಕಪ್ ಟೂರ್ನಿ ಆರಂಭಗೊಂಡಿದ್ದು ಮೊದಲ ಪಂದ್ಯ ಆತಿಥೇಯ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಗೆ ಎರಡನೇ ಎಸೆತದಲ್ಲಿ ಜಾನಿ ಬೈರ್ಸ್ಟೋವ್ರನ್ನು ಡಕೌಟ್ ಆಗಿರುವುದು ಕೊಂಚ ಹಿನ್ನಡೆಯಾಗಿದೆ.
ವಿಶ್ವಕಪ್ ಇತಿಹಾಸದಲ್ಲೇ ಮೊದಲ ಓವರ್ ಮಾಡಿದ ಖ್ಯಾತಿಗೆ ಇಮ್ರಾನ್ ತಾಹಿರ್ ಭಾಜನರಾಗಿದ್ದು ಅಲ್ಲದೆ ವಿಕೆಟ್ ಸಹ ಪಡೆದಿರುವುದು ಸಾಧನೆ ಸರಿ.
ಸದ್ಯ ಇಂಗ್ಲೆಂಡ್ ತಂಡ 40 ಓವರ್ ಮುಕ್ತಾಯದ ವೇಳೆಗೆ 4 ವಿಕೆಟ್ ನಷ್ಟಕ್ಕೆ 235 ರನ್ ಪೇರಿಸಿದೆ. ದಕ್ಷಿಣ ಆಫ್ರಿಕಾ ಪರ ಇಮ್ರಾನ್ ತಾಹಿರ್ 2, ರಬಾಡ ಮತ್ತು ಫೆಹ್ಲುಕ್ವೇವೊ ತಲಾ 1 ವಿಕೆಟ್ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ದಕ್ಷಿಣ ಆಫ್ರಿಕಾSouth Africaಇಂಗ್ಲೆಂಡ್EnglandImran Tahirಇಮ್ರಾನ್ ತಾಹಿರ್Cricket Offbeatಕ್ರಿಕೆಟ್ ಸ್ವಾರಸ್ಯICC World Cup 2019ಐಸಿಸಿ ವಿಶ್ವಕಪ್ 2019
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


