ವಿಶ್ವಕಪ್ ಮಹಾಸಮರ: ಶತ್ರು ರಾಷ್ಟ್ರ ಪಾಕ್ ಜೆರ್ಸಿ ಮೇಲೂ ಎಂಎಸ್ ಧೋನಿ ಹೆಸರು, ಮಾಹೀ ಲಕ್ಕಿ ನಂಬರ್!
ವಿಶ್ವಕಪ್ ಮಹಾಸಮರದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮತ್ತು ಟೀಂ ಇಂಡಿಯಾ ಎದುರಾಗಲಿವೆ. ಈ ಮಧ್ಯೆ ವಿಶೇಷ ಸಂಗತಿಯೊಂದು ನಡೆದಿದ್ದು ಪಾಕಿಸ್ತಾನದ ಜೆರ್ಸಿಯಲ್ಲೂ ಟೀಂ ಇಂಡಿಯಾ ಆಟಗಾರ...

Published On :
ಲಂಡನ್: ವಿಶ್ವಕಪ್ ಮಹಾಸಮರದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮತ್ತು ಟೀಂ ಇಂಡಿಯಾ ಎದುರಾಗಲಿವೆ. ಈ ಮಧ್ಯೆ ವಿಶೇಷ ಸಂಗತಿಯೊಂದು ನಡೆದಿದ್ದು ಪಾಕಿಸ್ತಾನದ ಜೆರ್ಸಿಯಲ್ಲೂ ಟೀಂ ಇಂಡಿಯಾ ಆಟಗಾರ ಎಂಎಸ್ ಧೋನಿಯ ಹೆಸರು ಮತ್ತು ಅವರ ನಂಬರ್ ಇದೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಶ್ವದಾದ್ಯಂತ ಎಂಎಸ್ ಧೋನಿಗೆ ಅಭಿಮಾನಿಗಳ ದೊಡ್ಡ ಬಳಗವೆ ಇದೆ. ಇನ್ನು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಅಭಿಮಾನಿಯೊರ್ವ ಪಾಕ್ ತಂಡದ ಜೆರ್ಸಿ ಮೇಲೆ ಧೋನಿ ಹೆಸರು ಮುದ್ರಿಸಿ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಟ್ವೀಟ್ ಇದೀಗ ಸಖತ್ ಸದ್ದು ಮಾಡುತ್ತಿದೆ.
ಪಾಕಿಸ್ತಾನದ ಕ್ರಿಕೆಟ್ ಪ್ರೇಮಿ ಶೆಜಾದ್ ಹಸನ್ ಎಂಬಾತ ಧೋನಿ ಹೆಸರು ಹಾಗೂ ಲಕ್ಕಿ ನಂಬರ್ 7 ಇರುವ ಜೆರ್ಸಿಯ ಫೋಟೋ ಟ್ವೀಟ್ ಮಾಡಿದ್ದು ಈ ಮೂಲಕ ಧೋನಿ ಮೇಲಿನ ಪ್ರೀತಿಯನ್ನು ತೋರಿಸಿದ್ದಾರೆ.
ಇಂಗ್ಲೆಂಡ್ ನಲ್ಲಿ ಮೇ 0ರಿಂದ ಟೂರ್ನಿ ಆರಂಭವಾಗುತ್ತಿದ್ದು ಟೀಂ ಇಂಡಿಯಾ ಹಾಗೂ ಪಾಕಿಸ್ತಾನ ಜೂನ್ 16ರಂದು ಮುಖಾಮುಖಿಯಾಗಲಿವೆ.
Thankyou @TPLUS for making my day...
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Pakistanಪಾಕಿಸ್ತಾನMS Dhoniಎಂಎಸ್ ಧೋನಿCricket Offbeatjerseyಜೆರ್ಸಿಕ್ರಿಕೆಟ್ ಸ್ವಾರಸ್ಯWorld Cup 2019ವಿಶ್ವಕಪ್ 2019
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


