ಧಿಮಾಕು ತೋರಿಸಿ ವಿಮಾನದಿಂದ ಹೊರ ದಬ್ಬಿಸಿಕೊಂಡ ಆಸೀಸ್ ಮಾಜಿ ಕ್ರಿಕೆಟಿಗ!
ಮಹಿಳೆಯರ ಜೊತೆ ವಾಗ್ವಾದ. ವಿಮಾನದಲ್ಲಿ ಅನುಚಿತ ವರ್ತನೆ ತೋರಿದ್ದರಿಂದ ವಿಮಾನದ ಸಿಬ್ಬಂದಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕೆಲ್ ಸ್ಲೇಟರ್ ರನ್ನು ಹೊರದಬ್ಬಿದ್ದಾರೆ.

Published On :
ಸಿಡ್ನಿ: ಮಹಿಳೆಯರ ಜೊತೆ ವಾಗ್ವಾದ. ವಿಮಾನದಲ್ಲಿ ಅನುಚಿತ ವರ್ತನೆ ತೋರಿದ್ದರಿಂದ ವಿಮಾನದ ಸಿಬ್ಬಂದಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕೆಲ್ ಸ್ಲೇಟರ್ ರನ್ನು ಹೊರದಬ್ಬಿದ್ದಾರೆ.
ವಾಗಾವಾಗಾಕ್ಕೆ ತೆರಳುತ್ತಿದ್ದ ಮೈಕೆಲ್ ಸ್ಲೇಟರ್ ವಿಮಾನ ಹೊರಡುವ ವೇಳೆ ಅಪರಿಚಿತ ಮಹಿಳೆಯರ ಜತೆ ವಾಗ್ವಾದ ನಡೆಸಿದ್ದಾರೆ. ಬಳಿಕ ಶೌಚಾಲಯದ ಒಳಕ್ಕೆ ಹೋಗಿ ಬಾಗಿಲು ಹಾಕಿ ಕುಳಿತಿದ್ದಾರೆ. ಈ ವೇಳೆ ಸಿಬ್ಬಂದಿ ಅವರನ್ನು ಹೊರಗೆ ಕರೆಸಿ ವಿಮಾನದಿಂದ ಹೊರಕ್ಕೆ ಹಾಕಿದ್ದಾರೆ.
ಈ ಗಲಾಟೆಯಿಂದಾಗಿ ವಿಮಾನ 30 ನಿಮಿಷ ತಡವಾಗಿ ಹಾರಟ ನಡೆಸಿತು. ಒಟ್ಟಿನಲ್ಲಿ ಧಿಮಾಕು ತೋರಿಸಲು ಹೋಗಿ ಆಸೀಸ್ ಮಾಜಿ ಆಟಗಾರನಿಗೆ ಗರ್ವಭಂಗವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


