ಪಾಕ್ ವಿರುದ್ಧದ ಎಡವಟ್ಟಿನಿಂದ ಬುದ್ದಿಕಲಿಯದ ಬುಮ್ರಾ, ಮತ್ತದೇ ನೋಬಾಲ್, ಧೋನಿ ನಾಟೌಟ್, ವಿಡಿಯೋ ವೈರಲ್!
ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಜಸ್ ಪ್ರೀತ್ ಬುಮ್ರಾ ಎಸೆದ ಒಂದು ನೋಬಾಲ್ ನಿಂದಾಗಿ ಪಾಕ್ ವಿರುದ್ಧ ಟೀಂ ಇಂಡಿಯಾ ಹೀನಾಯ ಸೋಲು ಕಾಣುವಂತಾಗಿತ್ತು.

Published On :
ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಜಸ್ ಪ್ರೀತ್ ಬುಮ್ರಾ ಎಸೆದ ಒಂದು ನೋಬಾಲ್ ನಿಂದಾಗಿ ಪಾಕ್ ವಿರುದ್ಧ ಟೀಂ ಇಂಡಿಯಾ ಹೀನಾಯ ಸೋಲು ಕಾಣುವಂತಾಗಿತ್ತು. ಇದರಿಂದ ಬುದ್ದಿ ಕಲಿಯದ ಬುಮ್ರಾ ಮತ್ತದೇ ನೋಬಾಲ್ ಮಾಡಿದ್ದು ಎಂಎಸ್ ಧೋನಿಗೆ ಜೀವಧಾನ ನೀಡಿದ್ದಾರೆ.
ಐಪಿಎಲ್ ಪಂದ್ಯಾವಳಿಯ ಕ್ಯಾಲಿಫೆಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವೇಗಿ ಜಸ್ ಪ್ರೀತ್ ಬುಮ್ರಾ ಎಸೆತದಲ್ಲಿ ಎಂಎಸ್ ಧೋನಿ ಬಿರುಸಿನ ಹೊಡೆತ ಬಾರಿಸಲು ಹೋಗಿ ಕೈನಿಂದ ಬ್ಯಾಟ್ ಜಾರಿತ್ತು. ಈ ವೇಳೆ ಬ್ಯಾಟ್ ಗೆ ತಗುಲಿದ್ದ ಚೆಂಡು ಆಟಗಾರನ ಕೈಸೇರಿತ್ತು. ಎಲ್ಲರೂ ಔಟ್ ಎಂಬ ಖುಷಿಯಲ್ಲಿದ್ದಾಗ ಅಂಪೈರ್ ಮಾತ್ರ ನೋಬಾಲ್ ಎಂದು ಹೇಳಿದರು.
ಒಟ್ಟಿನಲ್ಲಿ ಐಸಿಸಿ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾದ ಪ್ರಮುಖ ವೇಗಿಯಾಗಿ ಆಯ್ಕೆಯಾಗಿರುವ ಜಸ್ ಪ್ರೀತ್ ಬುಮ್ರಾ ಮೇಲೆ ಅತಿಯಾದ ನಿರೀಕ್ಷೆಗಳಿದ್ದು ಇನ್ನು ಮುಂದಾದರೂ ಇಂತಹ ಎಡವಟ್ಟಿನಿಂದ ಸುಧಾರಿಸಬೇಕಿದೆ. ಪ್ರಮುಖ ವಿಕೆಟ್ ಗಳು ನೋಬಾಲ್ ನಿಂದ ಕೈತಪ್ಪಿದರೆ ಅದಕ್ಕೆ ತಂಡ ಭಾರೀ ಬೆಲೆ ತೆರಬೇಕಾಗುತ್ತದೆ.
ಈ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆದ್ದ ಮುಂಬೈ ಇಂಡಿಯನ್ಸ್ ನೇರವಾಗಿ ಫೈನಲ್ ಪ್ರವೇಶಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Pakistanಪಾಕಿಸ್ತಾನMS Dhoniಎಂಎಸ್ ಧೋನಿJasprit BumrahCricket Offbeatಕ್ರಿಕೆಟ್ ಸ್ವಾರಸ್ಯಜಸ್ ಪ್ರೀತ್ ಬುಮ್ರಾIPL 2019ಐಪಿಎಲ್ 2019
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


