ಕ್ರಿಕೆಟ್

ನಿಧಾನಗತಿ ಸ್ಟಂಪ್: ಎಂಎಸ್ ಧೋನಿಗೆ ಕೀಪರ್ ಬೆನ್ ಫೋಕ್ಸ್‌ ಹೋಲಿಕೆಯನ್ನು ಟೀಕಿಸಿದ ನೆಟಿಗರು, ವಿಡಿಯೋ ವೈರಲ್!

ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಕೀಪರ್ ಬೆನ್ ಪೋಕ್ಸ್ ನಿಧಾನಗತಿ ಸ್ಟಂಪ್ ಮಾಡಿದ್ದರು. ಇದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದ್ದು ಈ ಮಧ್ಯೆ ಟೀಂ ಇಂಡಿಯಾದ....

ನಿಧಾನಗತಿ ಸ್ಟಂಪ್: ಎಂಎಸ್ ಧೋನಿಗೆ ಕೀಪರ್ ಬೆನ್ ಫೋಕ್ಸ್‌ ಹೋಲಿಕೆಯನ್ನು ಟೀಕಿಸಿದ ನೆಟಿಗರು, ವಿಡಿಯೋ ವೈರಲ್!
ಸಂಗ್ರಹ ಚಿತ್ರ
Published On :
ದುಬೈ: ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಕೀಪರ್ ಬೆನ್ ಪೋಕ್ಸ್ ನಿಧಾನಗತಿ ಸ್ಟಂಪ್ ಮಾಡಿದ್ದರು. ಇದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದ್ದು ಈ ಮಧ್ಯೆ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಹೆಸರನ್ನು ಎಳೆದು ತಂದಿರುವುದಕ್ಕೆ ನೆಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದುಬೈನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಐರ್ಲೆಂಡ್ ತಂಡದ ಆ್ಯಂಡ್ರೂ ಬಾರ್ನಬಿರನ್ನು ಇಂಗ್ಲೆಂಡ್ ಕೀಪರ್ ಬೆನ್ ಫೋಕ್ಸ್ ನಿಧಾನಗತಿಯಲ್ಲಿ ಔಟ್ ಮಾಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ ಕೀಪರ್ ಅವರ ಕ್ರೀಡಾಸ್ಫೂರ್ತಿಯನ್ನು ನೆಟಿಗರು ಪ್ರಶ್ನಿಸಿದ್ದಾರೆ.
ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮಿಂಚಿನ ವೇಗದ ಸ್ಟಂಪ್ ಸರದಾರ ಎಂಎಸ್ ಧೋನಿ ಅವರಿಗೆ ಬೆನ್ ಫೋಕ್ಸ್ ರನ್ನು ಹೋಲಿಸಲಾಗಿತ್ತು. ಇದಕ್ಕೆ ಆಕ್ರೋಶಗೊಂಡಿರುವ ನೆಟಿಗರು ಧೋನಿಗೆ ಬೆನ್ ರನ್ನು ಹೋಲಿಸಬೇಡಿ. ಧೋನಿ ಎಂದೆಂದಿಗೂ ಮಿಂಚಿನ ವೇಗದ ಸ್ಟಂಪಿಂಗ್ ಖ್ಯಾತಿಗೆ ಭಾಜನರಾದವರು ಎಂದು ಹೇಳುತ್ತಿದ್ದಾರೆ.
ಇನ್ನು ಬೆನ್ ಫೋಕ್ಸ್ ರ ನಿಧಾನಗತಿಯ ಸ್ಟಂಪ್ ಅನ್ನು ಐರ್ಲೆಂಡ್ ನಾಯಕ ವಿಲಿಯಮ್ ಖಂಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.