ಭಾರತ 'ಗೋಡೆ' ಖ್ಯಾತಿಯ ದ್ರಾವಿಡ್‌ಗೆ ಶ್ರೀಶಾಂತ್ ಅವಾಚ್ಯ ಶಬ್ಧಗಳಿಂದ ನಿಂದನೆ!
ಟೀಂ ಇಂಡಿಯಾದ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಅವರನ್ನು ವಿವಾದಾತ್ಮಕ ಕ್ರಿಕೆಟಿಗ ಶ್ರೀಶಾಂತ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ಮಾಜಿ ಕ್ರಿಕೆಟಿಗ ಪ್ಯಾಡಿ ಅಪ್ಟನ್ ಹೇಳಿದ್ದಾರೆ.

Published On :
ನವದೆಹಲಿ: ಟೀಂ ಇಂಡಿಯಾದ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಅವರನ್ನು ವಿವಾದಾತ್ಮಕ ಕ್ರಿಕೆಟಿಗ ಶ್ರೀಶಾಂತ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ಮಾಜಿ ಕ್ರಿಕೆಟಿಗ ಪ್ಯಾಡಿ ಅಪ್ಟನ್ ಹೇಳಿದ್ದಾರೆ.
ರಾಜಸ್ತಾನ ರಾಯಲ್ಸ್ ತಂಡದ ಕೋಚ್ ಪ್ಯಾಡಿ ಆಪ್ಟನ್ ಅವರು ತಮ್ಮ 'ದ ಬೇರ್ ಫೂಟ್ ಕೋಚ್' ಪುಸ್ತಕ ಈ ಬಗ್ಗೆ ಬರೆದುಕೊಂಡಿದ್ದಾರೆ. ಹೌದು 2013ರಲ್ಲಿ ರಾಹುಲ್ ದ್ರಾವಿಡ್ ರಾಜಸ್ತಾನ ರಾಯಲ್ಸ್ ತಂಡದ ನಾಯಕರಾಗಿದ್ದು ಆಗ ಶ್ರೀಶಾಂತ್ ಸ್ಪಾಟ್ ಫಿಕ್ಸಿಂಗ್ ಆರೋಪದಡಿ ಬಂಧನಕ್ಕೊಳಗಾಗುವ ಮುನ್ನ ಪಂದ್ಯದಿಂದ ಕೈಬಿಡಲಾಗಿತ್ತು. ಇದರಿಂದ ಸಿಟ್ಟಾದ ಶ್ರೀಶಾಂತ್ ದ್ರಾವಿಡ್ ಹಾಗೂ ನನ್ನನ್ನು ನಿಂದಿಸಿದ್ದರು ಎಂದು ಬರೆದಿದ್ದಾರೆ.
2013ರ ಮೇ 16ರಂದು ಶ್ರೀಶಾಂತ್ ರನ್ನು ಬಂಧಿಸಲಾಗಿತ್ತು. ಅದಕ್ಕೆ 24 ಗಂಟೆಗಳ ಮೊದಲು ಅಸಭ್ಯ ವರ್ತನೆ ಕಾರಣ ಅವರನ್ನು ತಂಡದಿಂದ ಹೊರಹಾಕಲಾಗಿತ್ತು ಎಂದು ಅಪ್ಟನ್ ತಿಳಿಸಿದ್ದಾರೆ.
ಪಂದ್ಯದಲ್ಲಿ ಆಡದ ಆಟಗಾರರಿಗೆ ನಿಮಗೆ ಸ್ಥಾನ ಸಿಕ್ಕಿಲ್ಲ ಎಂದು ಮುಂಚಿತವಾಗಿಯೇ ತಿಳಿಸುವುದು ಸಂಪ್ರದಾಯ. ಅದರಂತೆ ಶ್ರೀಶಾಂತ್ ಗೂ ಹೇಳಿದೆವು. ಆದರೆ ಅವರು ಅವಾಚ್ಯ ಶಬ್ಧಗಳಿಂದ ನನ್ನನ್ನು ಹಾಗೂ ದ್ರಾವಿಡ್ ರನ್ನು ನಿಂದಿಸಿದರು. ಪಂದ್ಯದಲ್ಲಿ ಆಡುತ್ತಿಲ್ಲ ಎಂದಿದ್ದಕ್ಕೆ ಅವರಿಗೇಕೆ ಅಷ್ಟೊಂದು ಸಿಟ್ಟು ಬಂದಿತ್ತು ಎಂದು ಬಳಿಕ ತಿಳಿಯಿತು ಎಂದು ಅಪ್ಟನ್ ಬರೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್Rahul Dravidರಾಹುಲ್ ದ್ರಾವಿಡ್S Sreesanthಎಸ್ ಶ್ರೀಶಾಂತ್IPL 2019ಐಪಿಎಲ್ 2019Paddy Uptonಪ್ಯಾಡಿ ಅಪ್ಟನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


