ಮುಂದಿನ ಸಲ ಕಪ್ ನಮ್ದೇ! ಈ ಬಾರಿಮಳೆಯಲ್ಲಿ ಕೊಚ್ಚಿಹೋದ ಆರ್ ಸಿಬಿ ಪ್ಲೇ ಆಫ್ ಕನಸು!
ಸತತ ಸೋಲುಗಳಿಂದ ಕಂಗೆಟ್ಟಿದ್ದ ಆರ್ ಸಿಬಿ ತಂಡದ ಇತ್ತೀಚಿನ ಗೆಲುವುಗಳಿಂದ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿತ್ತು. ಆದರೆ ಮೇ.30 ರಂದು ನಡೆದ ಪಂದ್ಯದಲ್ಲಿ ಮಳೆ ನೀರಿನಲ್ಲಿ ಆರ್ ಸಿಬಿ ಪ್ಲೇ ಆಫ್ ಕನಸು ಕೊಚ್ಚಿಹೋಯಿತು.

Published On :
ಬೆಂಗಳೂರು: ಸತತ ಸೋಲುಗಳಿಂದ ಕಂಗೆಟ್ಟಿದ್ದ ಆರ್ ಸಿಬಿ ತಂಡದ ಇತ್ತೀಚಿನ ಗೆಲುವುಗಳಿಂದ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿತ್ತು. ಆದರೆ ಮೇ.30 ರಂದು ನಡೆದ ಪಂದ್ಯದಲ್ಲಿ ಮಳೆ ನೀರಿನಲ್ಲಿ ಆರ್ ಸಿಬಿ ಪ್ಲೇ ಆಫ್ ಕನಸು ಕೊಚ್ಚಿಹೋಯಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ ಸಿಬಿ-ಆರ್ ಆರ್ ನಡುವಿನ ಪಂದ್ಯ ಮಳೆಯ ಕಾರಣದಿಂದಾಗಿ ತಲಾ 5 ಓವರ್ ಗಳಿಗೆ ಇಳಿಕೆ ಮಾಡಲಾಯಿತು. ನಿಗದಿತ 5 ಓವರ್ ಗಳಲ್ಲಿ ಆರ್ ಸಿಬಿ 7 ವಿಕೆಟ್ ಕಳೆದುಕೊಂಡು ಎದುರಾಳಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ 63 ರನ್ ಗಳ ಟಾರ್ಗೆಟ್ ನೀಡಿತ್ತು. ಆರ್ ಸಿಬಿ ಟಾರ್ಗೆಟ್ ನ್ನು ಬೆನ್ನಟ್ಟಿದ್ದ ರಾಜಸ್ಥಾನ್ ರಾಯಲ್ಸ್ ತಂಡ ಒಂದು ವಿಕೆಟ್ ನಷ್ಟಕ್ಕೆ 3.2 ಓವರ್ ಗಳಲ್ಲಿ 41 ರನ್ ಗಳಿಸಿತ್ತು.
ಪಂದ್ಯ ನಿರ್ಣಾಯಕ ಹಂತದಲ್ಲಿರುವಾಗ ಮತ್ತೆ ಮಳೆ ಪ್ರಾರಂಭವಾದ್ದರಿಂದ ಪಂದ್ಯವನ್ನು ರದ್ದುಗೊಳಿಸಲಾಯಿತು. ಅಷ್ಟೇ ಅಲ್ಲದೇ ಎರಡೂ ತಂಡಗಳಿಗೆ ತಲಾ ಒಂದು ಅಂಕವನ್ನು ಹಂಚಲಾಯಿತು. ಆರ್ ಸಿಬಿ ಪ್ಲೇ ಆಫ್ ಕನಸು ನನಸಾಗಬೇಕಿದ್ದರೆ ಈ ಪಂದ್ಯವನ್ನು ಗೆಲ್ಲಲೇಬೇಕಾಗಿತ್ತು. 13 ಪಂದ್ಯಗಳ ಪೈಕಿ 4 ರಲ್ಲಿ ಗೆದ್ದು ಒಂದರಲ್ಲಿ ಅಂಕಗಳನ್ನು ಹಂಚಿಕೊಂಡಿರುವ ಆರ್ ಸಿಬಿ 9 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ. ಇನ್ನುರಾಜಸ್ಥಾನ ರಾಯಲ್ಸ್ 11 ಅಂಕ ಗಳಿಸಿ 5 ನೇ ಸ್ಥಾನಕ್ಕೆ ಜಿಗಿದಿದ್ದು, ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
rainರಾಜಸ್ಥಾನ ರಾಯಲ್ಸ್ಪ್ಲೇ ಆಫ್tieplay offಬೆಂಗಳೂರು ರಾಯಲ್ ಚಾಲೆಂಜರ್ಸ್IPL 2019ಐಪಿಎಲ್ 2019Rajasthan vs Bangaloreಪಂದ್ಯ ರದ್ದು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


