ಕ್ರಿಕೆಟ್

ಐಪಿಎಲ್ ನಲ್ಲಿ 300 ಸಿಕ್ಸ್ ಬಾರಿಸಿ ಹೊಸ ದಾಖಲೆ ಬರದೆ ಕ್ರಿಸ್ ಗೇಲ್

ಸಿಕ್ಸ್​ರ್​ ಸರದಾರ ಎಂದೇ ಖ್ಯಾತಿ ಪಡೆದಿರುವ ವೆಸ್ಟ್ಇಂಡೀಸ್ ದಾಂಡಿಗ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರು ಶನಿವಾರ....

ಐಪಿಎಲ್ ನಲ್ಲಿ 300 ಸಿಕ್ಸ್ ಬಾರಿಸಿ ಹೊಸ ದಾಖಲೆ ಬರದೆ ಕ್ರಿಸ್ ಗೇಲ್
ಕ್ರಿಸ್ ಗೇಲ್
Published On :
ಮೊಹಾಲಿ: ಸಿಕ್ಸ್​ರ್​ ಸರದಾರ ಎಂದೇ ಖ್ಯಾತಿ ಪಡೆದಿರುವ ವೆಸ್ಟ್ಇಂಡೀಸ್ ದಾಂಡಿಗ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರು ಶನಿವಾರ 300ನೇ ಸಿಕ್ಸ್ ಸಿಡಿಸುವ ಮೂಲಕ ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದಿ ಮೊದಲ ಕ್ರಿಕೆಟಿಗ ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ.
ಇಂದು ಮೊಹಾಲಿಯ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ  ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ಗೇಲ್ ಈ ಸಾಧನೆ ಮಾಡಿದ್ದಾರೆ.
ವಿಶ್ವ ಟಿ20, ಏಕದಿನ ಹಾಗೂ ಟೆಸ್ಟ್​ ಇತಿಹಾಸದಲ್ಲಿ ಸಿಕ್ಸರ್​ ದಾಖಲೆ ಬರೆದಿರುವ ಗೇಲ್​ ಇದೀಗ ಐಪಿಎಲ್ ನಲ್ಲೂ ಹೊಸ ದಾಖಲೆ ಬರೆದಿದ್ದು, ಕ್ರಿಕೆಟ್​ ಇತಿಹಾಸದಲ್ಲಿ ನಾನೇ ಯೂನಿವರ್ಸಲ್​ ಬಾಸ್​ ಎಂಬ ತಮ್ಮ ಹೇಳಿಕೆ ನಿರೂಪಿಸಿದ್ದಾರೆ.
ಮುಂಬೈ ನೀಡಿರುವ 176 ರನ್​ ಗುರಿ ಬೆನ್ನತ್ತಿರುವ ಪಂಜಾಬ್​ಗೆ ಗೇಲ್​ ಉತ್ತಮ ಆರಂಭ ಒದಗಿಸಿಕೊಟ್ಟಿದ್ದಾರೆ. ಮಿಚೆಲ್​ ಮೆಕ್ಲೆಹೆಂಗನ್​ ಎಸೆದ ಮೂರನೇ ಓವರ್​ನಲ್ಲಿ ಬ್ಯಾಕ್​ ಟು ಬ್ಯಾಕ್​ ಎರಡು ಸಿಕ್ಸರ್​ ಸಿಡಿಸುವ ಮೂಲಕ 300 ಸಿಕ್ಸರ್​ ಗಡಿಯನ್ನು ಮುಟ್ಟಿ ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದಿ ಮೊದಲಿಗ ಎನಿಸಿಕೊಂಡಿದ್ದಾರೆ.
ಎರಡನೇ ಸ್ಥಾನದಲ್ಲಿ ಎಬಿ ಡಿವಿಲಿಯರ್ಸ್​ ಇದ್ದು, 143 ಪಂದ್ಯಗಳಲ್ಲಿ 192 ಸಿಕ್ಸರ್​ ಸಿಡಿಸಿದ್ದಾರೆ, 187 ಸಿಕ್ಸರ್​ ಮೂಲಕ ಧೋನಿ ಮೂರನೇ ಸ್ಥಾನದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.