ಆರ್‌ಸಿಬಿ ವಿರುದ್ಧ ಗೆಲುವಿನ ಬೆನ್ನಲ್ಲೇ ಮುಂಬೈ ಇಂಡಿಯನ್ಸ್‌ಗೆ ಶಾಕ್!
ಐಪಿಎಲ್ ಪಂದ್ಯಾವಳಿಯಲ್ಲಿ ಆರ್‌ಸಿಬಿ ವಿರುದ್ಧ ಗೆಲುವು ಸಾಧಿಸಿದ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಗೆ ಆಘಾತವೊಂದು ಎದುರಾಗಿದ್ದು ತಂಡದ ಸ್ಟಾರ್ ವೇಗಿಯೊಬ್ಬರು ತಂಡದಿಂದ ಹೊರಬಿದ್ದಿದ್ದಾರೆ.
Published On :
ಮುಂಬೈ: ಐಪಿಎಲ್ ಪಂದ್ಯಾವಳಿಯಲ್ಲಿ ಆರ್‌ಸಿಬಿ ವಿರುದ್ಧ ಗೆಲುವು ಸಾಧಿಸಿದ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಗೆ ಆಘಾತವೊಂದು ಎದುರಾಗಿದ್ದು ತಂಡದ ಸ್ಟಾರ್ ವೇಗಿಯೊಬ್ಬರು ತಂಡದಿಂದ ಹೊರಬಿದ್ದಿದ್ದಾರೆ.
ನ್ಯೂಜಿಲ್ಯಾಂಡ್ ತಂಡದ ವೇಗಿ ಆ್ಯಡಂ ಮಿಲ್ನೆ ಗಾಯಗೊಂಡು ಈ ಆವೃತ್ತಿಯಿಂದ ಹೊರಬಿದ್ದಿರುವುದು ರೋಹಿತ್ ಪಡೆಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಆಟಗಾರರ ಹರಾಜಿನಲ್ಲಿ ಮಿಲ್ನೆ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 75 ಲಕ್ಷ ನೀಡಿ ಖರೀದಿಸಿತ್ತು.
ಆ್ಯಡಂ ಮಿಲ್ನೆ ಬದಲಿಗೆ ವಿಂಡೀಸ್ ನ ಯುವ ವೇಗಿ ಅಲ್ಜಾರಿ ಜೋಸೆಫ್ ಗೆ ಅವಕಾಶ ನೀಡಲಾಗಿದೆ. ವಿಂಡೀಸ್ ಪರ 9 ಟೆಸ್ಟ್ 16 ಏಕದಿನ ಪಂದ್ಯಗಳನ್ನು ಆಡಿರುವ ಜೋಸೆಫ್ 2016ರಲ್ಲಿ ತಂಡ ಅಂಡರ್-19 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೇ ಮೊದಲ ಬಾರಿಗೆ ಅವರು ಐಪಿಎಲ್ ತಂಡವೊಂದರಲ್ಲಿ ಸ್ಥಾನ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
RCBMumbai Indiansಮುಂಬೈ ಇಂಡಿಯನ್ಸ್Adam Milneಆ್ಯಡಂ ಮಿಲ್ನೆಆರ್ಸಿಬಿIPL 2019ಐಪಿಎಲ್ 2019Alzarri Josephಅಲ್ಜಾರಿ ಜೋಸೆಫ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

