ಪಾಕ್ ಗೆ ತಿರುಗೇಟು; ಭಾರತದಲ್ಲಿ ಪಾಕ್-ಆಸಿಸ್ ಸರಣಿ ಪ್ರಸಾರ ಇಲ್ಲ!
ಭಾರತದ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ನ ಟಿವಿ ಪ್ರಸಾರವನ್ನು ನಿಷೇಧಿಸಿದ್ದ ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಭಾರತ ಕೂಡ ತಿರುಗೇಟು ನೀಡಿದ್ದು, ಪಾಕಿಸ್ತಾನ-ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ಸರಣಿಯ ಟಿವಿ ಪ್ರಸಾರವನ್ನು ಭಾರತ ನಿಷೇಧಿಸಿದೆ.

Published On :
ಚೆನ್ನೈ: ಭಾರತದ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ನ ಟಿವಿ ಪ್ರಸಾರವನ್ನು ನಿಷೇಧಿಸಿದ್ದ ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಭಾರತ ಕೂಡ ತಿರುಗೇಟು ನೀಡಿದ್ದು, ಪಾಕಿಸ್ತಾನ-ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ಸರಣಿಯ ಟಿವಿ ಪ್ರಸಾರವನ್ನು ಭಾರತ ನಿರ್ಬಂಧಿಸಿದೆ.
ಹೌದು.. ಶಾರ್ಜಾದಲ್ಲಿ ನಡೆಯುತ್ತಿರುವ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಟಿವಿ ಪ್ರಸಾರಕ್ಕೆ ಭಾರತ ನಿಷೇಧ ಹೇರಿದೆ. ಆದರೆ ಇದು ಭಾರತ ಸರ್ಕಾರ ಹೇರಿರುವ ನಿಷೇಧವಲ್ಲ. ಬದಲಿಗೆ ಐಪಿಎಲ್ ಪ್ರಸಾರಕ್ಕೆ ಪಾಕಿಸ್ತಾನ ಹೇರಿರುವ ನಿಷೇಧವನ್ನು ವಿರೋಧಿಸಿ ಡಿಸ್ಪೋರ್ಟ್ಸ್ ಸಂಸ್ಥೆ ಪಾಕ್-ಆಸಿಸ್ ಏಕದಿನ ಸರಣಿ ಪ್ರಸಾರಕ್ಕೆ ನಿರ್ಬಂಧ ಹೇರಿದೆ. ಅಂತೆಯೇ ಪಾಕಿಸ್ತಾನ-ಆಸಿಸ್ ಸರಣಿ ಪ್ರಸಾರದ ಮೇಲಿನಿ ನಿರ್ಬಂಧಕ್ಕೆ ಮತ್ತೂ ಒಂದು ಕಾರಣವಿದ್ದು, ಸರಣಿ ಪ್ರಸಾರದ ಹೊಣೆ ಹೊತ್ತಿರುವ ಸೋನಿ ಪಿಕ್ಟರ್ಸ್ ನೆಟ್ವರ್ಕ್ ಸಂಸ್ಥೆಗೆ ಪಾಕ್-ಆಸಿಸ್ ಏಕದಿನ ಸರಣಿ ಪ್ರಸಾರ ಶೆಡ್ಯೂಲಿಂಗ್ ಸಮಸ್ಯೆ ಎದುರಾಗಿದೆ. ಈ ಕಾರಣಕ್ಕಾಗಿಯೂ ಪಾಕ್-ಆಸಿಸ್ ಸರಣಿ ಪ್ರಸಾರಕ್ಕೆ ತಡೆ ಹೇರಲಾಗಿದೆ.
ಇನ್ನು ಪಾಕಿಸ್ತಾನದ ಪಿಎಸ್ ಎಲ್ ಟೂರ್ನಿಯನ್ನು ಭಾರತದಲ್ಲಿ ಪ್ರಸಾರ ಮಾಡುವ ಹಕ್ಕು ಪಡೆದಿದ್ದ ಭಾರತ ಮೂಲದ ಡಿ ಸ್ಪೋರ್ಟ್ಸ್ ಸಂಸ್ಥೆ ಪುಲ್ವಾಮ ಉಗ್ರ ದಾಳಿ ಬಳಿಕ ಪಿಎಸ್ ಎಲ್ ಟೂರ್ನಿಯಿಂದ ಹೊರ ಬಂದಿತ್ತು. ರಾಷ್ಟ್ರೀಯ ಹಿತಾಸಕ್ತಿ ಮತ್ತು ದೇಶದ ಜನರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಕಾರಣ ನೀಡಿ ಡಿ ಸ್ಪೋರ್ಟ್ ಪ್ರಸಾರ ಹಕ್ಕಿನಿಂದ ಹೊರ ನಡೆದಿತ್ತು. ಡಿ ಸ್ಫೋರ್ಟ್ ಅಂತಿಮ ಕ್ಷಣದ ನಿರ್ಧಾರದಿಂದಾಗಿ ಪಿಎಸ್ ಎಲ್ ಟೂರ್ನಿ ಭಾರತದಲ್ಲಿ ಪ್ರಸಾರವಾಗಿರಲಿಲ್ಲ. ಡಿ ಸ್ಫೋರ್ಟ್ ಮಾತ್ರವಲ್ಲದೇ ಭಾರತ ಮೂಲದ ಕ್ರೀಡಾ ವೆಬ್ ಸೈಟ್ ವೊಂದು ತನ್ನ ವೆಬ್ ತಾಣದಿಂದ ಪಿಎಸ್ ಎಲ್ ಸ್ಕೋರ್ ಬೋರ್ಡ್ ಅನ್ನು ತೆಗೆದು ಹಾಕಿತ್ತು.
ಇದನ್ನೇ ಕಾರಣವಾಗಿಸಿಕೊಂಡ ಪಾಕಿಸ್ತಾನ ಕ್ರೀಡಾ ಸಚಿವಾಲಯ ಇತ್ತೀಚೆಗೆ ಪಾಕಿಸ್ತಾನದಲ್ಲಿ ಐಪಿಎಲ್ ಟೂರ್ನಿ ಪ್ರಸಾರಕ್ಕೆ ನಿರ್ಬಂಧ ಹೇರಿದೆ. ಇದಕ್ಕೆ ತಿರುಗೇಟು ಎಂಬಂತೆ ಭಾರತದಲ್ಲಿಯೂ ಕೂಡ ಪಾಕಿಸ್ತಾನ-ಆಸಿಸ್ ಕ್ರಿಕೆಟ್ ಟೂರ್ನಿ ಪ್ರಸಾರ ಸ್ಥಗಿತವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


