ಕ್ರಿಕೆಟ್

ಮೈದಾನದಲ್ಲಿ ಕೊಹ್ಲಿ ಕೋಪ ನೋಡಿದರೆ ಭಯವಾಗುತ್ತೆ: ರಿಷಬ್ ಪಂತ್

ಟೀಂ ಇಂಡಿಯಾದ ಯುವ ಕ್ರಿಕೆಟಿಗ ರಿಷಬ್ ಪಂತ್ ಅವರು ನಾಯಕ ವಿರಾಟ್ ಕೊಹ್ಲಿಯ ಕೋಪ ನೋಡಿದರೆ ನನಗೆ ಭಯವಾಗುತ್ತದೆ ಎಂದು ಹೇಳಿದ್ದಾರೆ.

ಮೈದಾನದಲ್ಲಿ ಕೊಹ್ಲಿ ಕೋಪ ನೋಡಿದರೆ ಭಯವಾಗುತ್ತೆ: ರಿಷಬ್ ಪಂತ್
ವಿರಾಟ್ ಕೊಹ್ಲಿ, ರಿಷಬ್ ಪಂತ್
Published On :
ನವದೆಹಲಿ: ಟೀಂ ಇಂಡಿಯಾದ ಯುವ ಕ್ರಿಕೆಟಿಗ ರಿಷಬ್ ಪಂತ್ ಅವರು ನಾಯಕ ವಿರಾಟ್ ಕೊಹ್ಲಿಯ ಕೋಪ ನೋಡಿದರೆ ನನಗೆ ಭಯವಾಗುತ್ತದೆ ಎಂದು ಹೇಳಿದ್ದಾರೆ.
ಐಪಿಎಲ್ ನಲ್ಲಿ ದೆಹಲಿ ಕ್ಯಾಪ್ಟಿಲ್ ಪರ ಆಡುತ್ತಿರುವ ರಿಷಬ್ ಪಂತ್ ಅವರು ಸಂದರ್ಶನದ ವೇಳೆ ವಿರಾಟ್ ಕೊಹ್ಲಿಯ ಕೋಪದ ಬಗ್ಗೆ ಮಾತನಾಡಿದ್ದು ಮೈದಾನದಲ್ಲಿ ಮತ್ತು ಹೊರಗೆ ನಾನು ಯಾರಿಗೂ ಹೆದರಲ್ಲ. ಆದರೆ ಮೈದಾನದಲ್ಲಿ ವಿರಾಟ್ ಕೊಹ್ಲಿ ಕೋಪ ಮಾಡಿಕೊಂಡರೆ ಭಯವಾಗುತ್ತದೆ. ನಾವು ಸರಿಯಾಗಿ ಆಡಿದರೆ ಕೊಹ್ಲಿ ಕೋಪಗೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ.
ಕೆಲ ಬಾರಿ ತಪ್ಪು ಮಾಡಿದಾಗ ಇತರೆ ಆಟಗಾರರು ನಮ್ಮ ಮೇಲೆ ಮುನಿಸಿಕೊಳ್ಳುತ್ತಾರೆ. ತಪ್ಪುಗಳಾದಾಗ ನಾಯಕ ಹೇಳಿದಾಗ ಅರ್ಥವಾಗುತ್ತದೆ. ಈ ವೇಳೆ ನಾವು ಮಾಡಿದ ತಪ್ಪಿನ ಅರಿವು ನಮಗಾಗುತ್ತದೆ ಎಂದು ರಿಷಬ್ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ಪ್ರವಾಸದ ಏಕದಿನ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ರಿಷಬ್ ಪಂತ್ ಕಳಪೆ ಪ್ರದರ್ಶನ ನೀಡಿದ್ದರು. ಅಲ್ಲದೆ ಸುಲಭದ ಕ್ಯಾಚ್ ಹಾಗೂ ಸ್ಟಂಪ್ ಮಾಡುವುದರಲ್ಲಿ ಎಡವಿದ್ದರು. ಇದು ಕೊಹ್ಲಿ ಕೋಪಕ್ಕೆ ಕಾರಣವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.