ವಿಶ್ವಕಪ್‍ನಲ್ಲಿ ಹ್ಯಾಟ್ರಿಕ್-ವಿಕೆಟ್ ಖ್ಯಾತಿಯ ಶಮಿಯನ್ನು 'ಲಫಂಗ' ಎಂದು ಜರಿದ ಪತ್ನಿ ಹಸೀನ್, ಪೋಸ್ಟ್ ವೈರಲ್!
ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದು ಆಫ್ಘಾನ್ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆಯನ್ನು ಮಾಡಿದ್ದು...

Published On :
ನವದೆಹಲಿ: ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದು ಆಫ್ಘಾನ್ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆಯನ್ನು ಮಾಡಿದ್ದು ಅವರನ್ನು ಪತ್ನಿ ಹಸೀನ್ ಜಹಾನ್ ಲಫಂಗ ಎಂದು ಜರಿದಿರುವ ಪೋಸ್ಟ್ ವೈರಲ್ ಆಗಿದೆ.
ವೈಯಕ್ತಿಕ ಬದುಕಿನ ಜಂಜಾಟದಿಂದಾಗಿ ಭಾರೀ ಸುದ್ದಿಯಾಗಿದ್ದ ಮೊಹಮ್ಮದ್ ಶಮಿಗೆ ಪತ್ನಿಯೇ ಸಾಮಾಜಿಕ ಜಾಲತಾಣಗಳಲ್ಲಿ ಚಾರಿತ್ರ್ಯಹರಣ ಮಾಡಿದ್ದಾರೆ. ಹ್ಯಾಟ್ರಿಕ್ ವಿಕೆಟ್ ಪಡೆದಿದ್ದ ಶಮಿಯನ್ನು ಜಹಾನ್ ಪರೋಕ್ಷವಾಗಿ ಹೊಗಳಿದ್ದರು. ಆದರೆ ವಿಂಡೀಸ್ ವಿರುದ್ಧದ ಪಂದ್ಯದ ನಂತರ ಶಮಿಯ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ.
ಶಮಿಯನ್ನು ಲಫಂಗ ಎಂದು ಜರಿದ ಜಹಾನ್ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದು ಈ ಫೋಸ್ಟ್ ಭಾರೀ ವೈರಲ್ ಆಗಿದೆ. ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾಗೆ ಆಪತ್ಭಾಂದವನಾಗಿರುವ ಶಮಿಯ ಇನ್ನೊಂದು ಮುಖವನ್ನು ಸಮಾಜಕ್ಕೆ ತಿಳಿಸುವ ಪ್ರಯತ್ನಕ್ಕೆ ಹಸೀನ್ ಕೈ ಹಾಕಿದ್ದಾರೆ.
ಮೊಹಮ್ಮದ್ ಶಮಿ ಟಿಕ್ ಟಾಕ್ ಅಕೌಂಟ್ ತೆರೆದಿದ್ದಾನೆ. ಆತ ಒಟ್ಟಾರೆ 97 ಮಂದಿಯನ್ನು ಫಾಲೋ ಮಾಡುತ್ತಿದ್ದು ಅದರಲ್ಲಿ 90 ಮಂದಿ ಹುಡುಗಿಯರದ್ದೆ. ಒಂದು ಮಗುವಿನ ತಂದೆಯಾಗಿ ಇದು ನಾಚಿಕೆಗೇಡು ಎಂದು ಪೋಸ್ಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


