ಕಾಟ್ರೆಲ್ 'ಆರ್ಮಿ ಸೆಲ್ಯೂಟ್' ಅಣುಕಿಸಿದ ಮೊಹಮ್ಮದ್ ಶಮಿ, ಕೊಹ್ಲಿ, ಚಹಾಲ್ ವ್ಯಂಗ್ಯ ನಗೆ, ವಿಡಿಯೋ ವೈರಲ್!
ವೆಸ್ಟ್ ಇಂಡೀಸ್ ತಂಡದ ವೇಗಿ ಶೆಲ್ಡನ್ ಕಾಟ್ರೆಲ್ ಪ್ರತಿ ಬಾರಿಯೂ ವಿಕೆಟ್ ಪಡೆದಾಗ ಆರ್ಮಿ ಸೆಲ್ಯೂಟ್ ಹೊಡೆದು ಸಂಭ್ರಮಿಸುತ್ತಿದ್ದರು. ಟೀಂ ಇಂಡಿಯಾ ವಿರುದ್ಧದ...

Published On :
ಮ್ಯಾಂಚೆಸ್ಟರ್: ವೆಸ್ಟ್ ಇಂಡೀಸ್ ತಂಡದ ವೇಗಿ ಶೆಲ್ಡನ್ ಕಾಟ್ರೆಲ್ ಪ್ರತಿ ಬಾರಿಯೂ ವಿಕೆಟ್ ಪಡೆದಾಗ ಆರ್ಮಿ ಸೆಲ್ಯೂಟ್ ಹೊಡೆದು ಸಂಭ್ರಮಿಸುತ್ತಿದ್ದರು. ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಶಮಿಯನ್ನು ಔಟ್ ಮಾಡಿದ ಕಾಟ್ರೆಲ್ ಇದೇ ರೀತಿ ಸಂಭ್ರಮಿಸಿದ್ದು ಇದಕ್ಕೆ ಪ್ರತಿಯಾಗಿ ಮೊಹಮ್ಮದ್ ಶಮಿ ವ್ಯಂಗ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಿನ್ನೆ ನಡೆದ ಪಂದ್ಯದಲ್ಲಿ ಕಾಟ್ರೆಲ್ ಒಂದು ವಿಕೆಟ್ ಪಡೆದಿದ್ದರು. ಅದು ಮೊಹಮ್ಮದ್ ಶಮಿ ವಿಕೆಟ್. ಕಾಟ್ರೆಲ್ ಎಸೆತದಲ್ಲಿ ಮೊಹಮ್ಮದ್ ಶಮಿ ಕೀಪರ್ ಶಾಯ್ ಹೋಪ್ ಗೆ ಕ್ಯಾಚ್ ನೀಡಿದ್ದರು. ಈ ವೇಳೆ ಕಾಟ್ರೆಲ್ ಆರ್ಮಿ ಸೆಲ್ಯೂಟ್ ಹೊಡೆದು ಸಂಭ್ರಮಿಸಿದ್ದರು.
ನಂತರ ವೆಸ್ಟ್ ಇಂಡೀಸ್ ಬ್ಯಾಟಿಂಗ್ ವೇಳೆ ಬ್ಯಾಟ್ ಬೀಸಿದ ಕಾಟ್ರೆಲ್ ಯಜುವೇಂದ್ರ ಚಹಾಲ್ ಎಸೆತದಲ್ಲಿ ಎಲ್ಬಿಡಬ್ಲ್ಯೂಗೆ ಔಟ್ ಆಗಿದ್ದು ಈ ವೇಳೆ ಮೊಹಮ್ಮದ್ ಶಮಿ ಸಹ ಕಾಟ್ರೆಲ್ ಸೆಲ್ಯೂಟ್ ಅನ್ನು ಅಣುಕಿಸಿದರು. ಇದನ್ನು ಕಂಡ ಚಹಾಲ್ ಮತ್ತು ವಿರಾಟ್ ಕೊಹ್ಲಿ ವ್ಯಂಗ್ಯವಾದ ನಗೆಯೊಂದಿಗೆ ಸಂಭ್ರಮಿಸಿದರು.
ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾ 125 ರನ್ ಗಳಿಂದ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಈ ಗೆಲುವು ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಅಜೇಯ 5ನೇ ಗೆಲುವಾಗಿದೆ.
Never ever ever in your life mess with Indians
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Virat Kohliವಿರಾಟ್ ಕೊಹ್ಲಿMohammed Shamiಮೊಹಮ್ಮದ್ ಶಮಿCricket Offbeatಕ್ರಿಕೆಟ್ ಸ್ವಾರಸ್ಯSheldon Cottrellವಿಶ್ವಕಪ್ 2019CWC19ಶೆಲ್ಡನ್ ಕಾಟ್ರೆಲ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


