ಶಿಖರ್ ಧವನ್ ಬೇಗ ಚೇತರಿಸಿಕೊಳ್ಳುವಂತೆ ಪ್ರಧಾನಿ ಮೋದಿ ಶುಭ ಹಾರೈಕೆ
ಎಡಗೈ ಹೆಬ್ಬೆರಳಿನ ಗಾಯ ಗುಣವಾಗದಿರುವುದರಿಂದ ವಿಶ್ವಕಪ್ ಟೂರ್ನಿಯಲ್ಲಿ ತಂಡದಿಂದ ಹೊರಗುಳಿಯಬೇಕಾಗಿರುವ ಬಂದಿರುವ ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ.

Published On :
ನವದೆಹಲಿ: ಎಡಗೈ ಹೆಬ್ಬೆರಳಿನ ಗಾಯ ಗುಣವಾಗದಿರುವುದರಿಂದ ವಿಶ್ವಕಪ್ ಟೂರ್ನಿಯಲ್ಲಿ ತಂಡದಿಂದ ಹೊರಗುಳಿಯಬೇಕಾಗಿರುವ ಬಂದಿರುವ ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ.
ಪ್ರೀತಿಯಿ ಶಿಖರ್ ಧವನ್ , ಅನುಮಾನವೇ ಇಲ್ಲ. ಮೈದಾನ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದೆ. ಆದರೆ, ನೀವು ಬೇಗ ಚೇತರಿಸಿಕೊಳ್ಳುತ್ತೀರಾ ಎಂಬ ನಂಬಿಕೆಯಿದೆ. ನೀವು ಮತ್ತೆ ಮೈದಾನಕ್ಕೆ ಮರಳಿ ದೇಶ ಹೆಚ್ಚಿನ ಪಂದ್ಯ ಗೆಲಲ್ಲು ಕೊಡುಗೆ ನೀಡಿ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಶಿಖರ್ ದವನ್ ತಂಡದಿಂದ ಹೊರಗುಳಿದಿದ್ದು, ರಿಷಭ್ ಪಂತ್ ಅಧಿಕೃತವಾಗಿ ಧವನ್ ಜಾಗಕ್ಕೆ ಸೇರಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶಿಖರ್ ಧವನ್ ಗಾಯಗೊಂಡ ನಂತರ ರಿಷಭ್ ಪಂತ್ ಲಂಡನ್ ಗೆ ಹಾರಿದ್ದು, ಒಂದು ವಾರದಿಂದ ಅಲ್ಲಿಯೇ ಇದ್ದಾರೆ.
2013ರ ಚಾಂಫಿಯನ್ಸ್ ಟ್ರೋಫಿ ಮತ್ತು 2015ರ ವಿಶ್ವಕಪ್ ಸೇರಿದಂತೆ ಕಳೆದ ಐದು ಬಹು ರಾಷ್ಟ್ರೀಯ ಟೂರ್ನಿಗಳಲ್ಲಿ ಧವನ್ ಅತಿ ಹೆಚ್ಚಿನ ರನ್ ಗಳಿಸಿರುವ ಆಟಗಾರರಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ 2019 ಟೂರ್ನಿಯ ಪಂದ್ಯದಲ್ಲಿ ಎಡಗೈ ಹೆಬ್ಬೆರಳಿನ ಗಾಯದ ನಡುವೆಯೂ ಶತಕದಾಟದ ಮೂಲಕ ತಂಡ ಗೆಲ್ಲುವಲ್ಲಿ ಪ್ರಮುಖ ಕೊಡುಗೆ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketindiaಭಾರತಪ್ರಧಾನಿ ಮೋದಿShikhar Dhawanಶಿಖರ್ ಧವನ್ICC World Cup 2019ಐಸಿಸಿ ವಿಶ್ವ ಕಪ್ 2019PM Modi ಕ್ರಿಕೆಟ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


