ಜಾಹೀರಾತಿನಲ್ಲಿ ಪಾಕಿಸ್ತಾನಕ್ಕೆ ಅವಮಾನ: ಐಸಿಸಿಗೆ ಪಾಕ್ ಕ್ರಿಕೆಟ್ ಮಂಡಳಿ ದೂರು
ಜಾಹೀರಾತಿನಲ್ಲಿ ಪಾಕಿಸ್ತಾನಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪ್ರಸಾರ ಹಕ್ಕು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ದೂರು ನೀಡಿದೆ.

Published On :
ಮ್ಯಾಂಚೆಸ್ಟರ್ : ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಸಂಬಂಧಿಸಿದ ಜಾಹೀರಾತಿನಲ್ಲಿ ಪಾಕಿಸ್ತಾನಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪ್ರಸಾರ ಹಕ್ಕು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ದೂರು ನೀಡಿದೆ.
ಈ ಕುರಿತು ಐಸಿಸಿ ಅಧಿಕಾರಿಗಳು ವಾಹಿನಿಗೆ ಎಚ್ಚರಿಕೆ ನೀಡಿದ್ದಾರೆ.ಆದರೆ, ಬಿಸಿಸಿಐ ಏನನ್ನೂ ಪ್ರತಿಕ್ರಿಯಿಸಿಲ್ಲ. ಪಿಸಿಬಿಯ ಪರವಾಗಿ ಎಹ್ಸಾನ್ ಮನಿ ಅವರು ಐಸಿಸಿಗೆ ದೂರು ಸಲ್ಲಿಸಿದ್ದಾರೆ ಎಂಬುದು ತಿಳಿದುಬಂದಿದೆ. ಆದರೆ, ದೂರು ಲಿಖಿತವಾಗಿದೆಯೋ ಅಥವಾ ದೂರವಾಣಿ ಮೂಲಕ ಸಲ್ಲಿಸಲಾಗಿದೆಯೋ ಗೊತ್ತಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತ ವಿರುದ್ಧದ ಪಂದ್ಯದ ಕುರಿತ ಮೌಕಾ ಮೌಕಾ ಎಂಬ ಜಾಹೀರಾತಿನಲ್ಲಿ ಭಾರತದ ಅಭಿಮಾನಿಗಳು ಪಾಕಿಸ್ತಾನದ ಅಭಿಯಾನಿಗಳನ್ನು ಹೀಯಾಳಿಸುವಂತೆ ಚಿತ್ರಿಸಲಾಗಿದೆ ಎಂದು ಪಿಸಿಬಿ ದೂರಿನಲ್ಲಿ ಹೇಳಿದೆ ನ್ನಲಾಗಿದೆ. ವಿಶ್ವಕಪ್ ನಲ್ಲಿ ಭಾರತ ಎದುರಿನ ಆರು ಪಂದ್ಯಗಳನ್ನು ಪಾಕಿಸ್ತಾನ ಸೋತಿರುವುದು ಜಾಹೀರಾತಿನ ತಿರುಳಾಗಿದೆ.
ಜಾಹೀರಾತಿನಲ್ಲಿ ಬಾಂಗ್ಲಾದೇಶದ ಕ್ರಿಕೆಟ್ ಪ್ರೇಮಿಯೊಬ್ಬ ಪಾಕಿಸ್ತಾನದ ಅಭಿಮಾನಿಯೊಂದಿಗೆ ಮಾತನಾಡುತ್ತ ಭಾರತ ವಿರುದ್ಧದ ಪಂದ್ಯದ ಬಗ್ಗೆ ಅಭಿಪ್ರಾಯ ಕೇಳುತ್ತಾನೆ. ಆಗ ಪಾಕಿಸ್ತಾನದ ಅಭಿಮಾನಿ ಮರಳಿ ಯತ್ನನ ಮಾಡು ಎಂದು ನನ್ನ ಅಪ್ಪ ಹೇಳಿದ್ದಾರೆ ಎನ್ನುತ್ತಾನೆ. ಪಕ್ಕದಲ್ಲಿರುವ ಭಾರತದ ಅಭಿಮಾನಿ ನಾನು ಯಾವತ್ತೂ ಹಾಗೆ ಹೇಳಲಿಲ್ಲ ಎನ್ನುತ್ತಾನೆ.
ಈ ಮಧ್ಯೆ ಭಾರತದ ವಾಹಿನಿಯೊಂದರ ಪ್ರತಿನಿಧಿಗಳು ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಅವರ ಮಾನ್ಯತೆಯನ್ನು ರದ್ದು ಮಾಡಲಾಗಿದೆ. ವಾಹಿನಿಯ ವರದಿಗಾರ ಮತ್ತು ಕ್ಯಾಮರಾಮನ್ ಕೊಹ್ಲಿ ಅವರ ಪಂದ್ಯಪೂರ್ವ ಪತ್ರಿಕಾಗೋಷ್ಠಿಯ ನೇರ ಪ್ರಸಾರ ಮಾಡಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕೊಹ್ಲಿ ಪತ್ರಿಕಾಗೋಷ್ಠಿಯನ್ನು ಫೇಸ್ ಬುಕ್ ಲೈವ್ ಮೂಲಕ ತೋರಿಸಿದ್ದರಿಂದ ಅವರಿಗೆ ಎಚ್ಚರಿಕೆ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
CricketindiaಭಾರತPakistanಪಾಕಿಸ್ತಾನಜಾಹೀರಾತುಐಸಿಸಿPCBಪಿಸಿಬಿcommercialICC World Cup 2019ಐಸಿಸಿ ವಿಶ್ವಕಪ್ 2019ICC ಕ್ರಿಕೆಟ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


