ಬ್ಯಾಟಿಂಗ್ ವೇಳೆ ಕೊಹ್ಲಿ ಎಡವಟ್ಟು, ಔಟಾಗದಿದ್ದರೂ ಮೈದಾನದಿಂದ ಹೊರ ನಡೆದ 'ರನ್ ಮೆಷಿನ್ 'ವಿಡಿಯೋ
ನಿನ್ನೆ ನಡೆದ ಪಾಕಿಸ್ತಾನ ವಿರುದ್ಧದ ಹೈ ವೊಲ್ಟೇಜ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೇಳೆ ಎಡವಟ್ಟು ಮಾಡಿಕೊಂಡರು.

Published On :
ಮ್ಯಾಂಚೆಸ್ಟರ್ : ನಿನ್ನೆ ನಡೆದ ಪಾಕಿಸ್ತಾನ ವಿರುದ್ಧದ ಹೈ ವೊಲ್ಟೇಜ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೇಳೆ ಎಡವಟ್ಟು ಮಾಡಿಕೊಂಡರು.
ಮೊಹಮ್ಮದ್ ಅಮಿರ್ ಎಸೆದ 48 ನೇ ಓವರ್ ನ 4 ನೇ ಎಸೆತದಲ್ಲಿ ಚೆಂಡು ಬೌನ್ಸ್ ಆಯಿತು. ಅದನ್ನು ಬಾರಿಸಲು ಕೊಹ್ಲಿ ವಿಫಲವಾದರು. ಚೆಂಡು ಕೀಪರ್ ಸರ್ಫರಾಜ್ ಕೈಗೆ ಸೇರಿತು. ಪಾಕಿಸ್ತಾನೀಯರು ಅರೆ ಮನಸ್ಸಿನಿಂದ ಮನವಿ ಮಾಡಿದರು.
ಅಂಪೈರ್ ಅದನ್ನು ಪುರಸ್ಕರಿಸಲಿಲ್ಲ. ಆದರೆ, ಅಂಪೈರ್ ತೀರ್ಪಿಗೆ ಕಾಯದೆೇ ಕೊಹ್ಲಿ ಮೈದಾನದಿಂದ ಹೊರ ನಡೆದರು. ಪುನರ್ ಪರಿಶೀಲನೆಯಲ್ಲಿ ಔಟಲ್ಲ ಎನ್ನುವುದು ಸ್ಪಷ್ಟವಾಗ ಕಾಣುತಿತ್ತು. ಹಾಗಿರುವಾಗ ಅಂಪೈರ್ ನೌಟೌಟು ಕೊಟ್ಟರು, ಕೊಹ್ಲಿ ಯಾಕೆ ಹೀಗೆ ಮಾಡಿದ್ದರು ಎಂಬುದು ಗೊತ್ತಿಲ್ಲ.
ಡ್ರೆಸ್ಸಿಂಗ್ ಕೊಠಡಿಯಲ್ಲಿ ತಮ್ಮ ತಪ್ಪಿನಿಂದ ಕೊಹ್ಲಿ ಸಿಟ್ಟಾಗಿದ್ದು ಕಾಣಿಸುತಿತ್ತು. ಬ್ಯಾಟ್ ಗೆ ಚೆಂಡು ತಾಕಿದಾಗ ಬರುವ ಒಂದು ಶಬ್ದ ಕೇಳಿಸಿದಂತಾಗಿದ್ದರಿಂದ ಕೊಹ್ಲಿ ಇಂತಹ ನಿರ್ಧಾರ ಮಾಡಿರಬಹುದೆಂದು ಊಹಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketವಿರಾಟ್ ಕೊಹ್ಲಿಭಾರತ- ಪಾಕಿಸ್ತಾನIndia- PakistanICC World Cup 2019ಐಸಿಸಿ ವಿಶ್ವಕಪ್ 2019Virat Kohli ಕ್ರಿಕೆಟ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


