ಮತ್ತೇ ಮೂರ್ಖರಾದ ಪಾಕ್ ಫೀಲ್ಡರ್ಸ್, ರನೌಟ್ ಮಿಸ್, ವಿಡಿಯೋ ವೈರಲ್!
ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಅವರನ್ನು ಸುಲಭವಾಗಿ ರನೌಟ್ ಮಾಡುವ ಅವಕಾಶವನ್ನು ಪಾಕಿಸ್ತಾನದ ಆಟಗಾರರು ಮಿಸ್ ಮಾಡಿಕೊಂಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

Published On :
ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಅವರನ್ನು ಸುಲಭವಾಗಿ ರನೌಟ್ ಮಾಡುವ ಅವಕಾಶವನ್ನು ಪಾಕಿಸ್ತಾನದ ಆಟಗಾರರು ಮಿಸ್ ಮಾಡಿಕೊಂಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
ಮ್ಯಾಂಚೆಸ್ಟರ್ ನಲ್ಲಿ ನಡೆಯುತ್ತಿರುವ ಪಾಕಿಸ್ತಾನ ಮತ್ತು ಟೀಂ ಇಂಡಿಯಾ ನಡುವಿನ ಪಂದ್ಯದಲ್ಲಿ ಪಾಕ್ ವೇಗಿ ವಹಾಬ್ ಬೌಲಿಂಗ್ ನಲ್ಲಿ ಕೆಎಲ್ ರಾಹುಲ್ ಲೆಗ್ ಸೈಡ್ ನಲ್ಲಿ ಚೆಂಡನ್ನು ಬಾರಿಸಿದರು.
ಇನ್ನು ಸುಲಭವಾಗಿ 1 ರನ್ ತೆಗೆದುಕೊಂಡಿದ್ದ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಎರಡನೇ ರನ್ ತೆಗೆದುಕೊಳ್ಳಲು ಮುಂದಾದರು. ಈ ವೇಳೆ ಸ್ಟ್ರೈಕ್ ನಲ್ಲಿದ್ದ ರೋಹಿತ್ ವೇಗವಾಗಿ ಓಡಿಬಂದರು. ಆದರೆ ರಾಹುಲ್ ಬೇಡ ಅನ್ನುವಷ್ಟರಲ್ಲಿ ಪಾಕ್ ಫೀಲ್ಡರ್ ನಾನ್ ಸ್ಟ್ರೈಕ್ ನತ್ತ ಚೆಂಡು ಎಸೆದರು.
ಅಷ್ಟರಲ್ಲಿ ಕ್ರಿಸ್ ನ ಮಧ್ಯಕ್ಕೆ ಬಂದಿದ್ದ ರೋಹಿತ್ ಹಿಂದಕ್ಕೆ ಓಡಿ ವಿಕೆಟ್ ಉಳಿಸಿಕೊಂಡರು. ಆದರೆ ಪಾಕಿಗರು ಮತ್ತೆ ತಮ್ಮ ಮುರ್ಖತನವನ್ನು ಪ್ರದರ್ಶಿಸಿದ್ದರ ಫಲ ಇದಾಗಿದೆ.
How we are supposed to explain it to anyone that this was not a run out from this situation
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್indiaPakistanRohit Sharmaರೋಹಿತ್ ಶರ್ಮಾಪಂದ್ಯMatchಭಾರತ- ಪಾಕಿಸ್ತಾನICC World Cup 2019ಐಸಿಸಿ ವಿಶ್ವಕಪ್ 2019
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


